ಕಲ್ಲಬೆಟ್ಟುವಿನಲ್ಲಿ ಮೊಸರು ಕುಡಿಕೆ ಉತ್ಸವದಂಗವಾಗಿ ಮುದ್ದುಕೃಷ್ಣ ಸ್ಪರ್ಧೆ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟುವಿನಲ್ಲಿ ಮೊಸರು ಕುಡಿಕೆ ಉತ್ಸವದಂಗವಾಗಿ ಮುದ್ದುಕೃಷ್ಣ ಸ್ಪರ್ಧೆ 



ಮೂಡುಬಿದಿರೆ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕಲ್ಲಬೆಟ್ಟುವಿನ ಗೋವುಗುಡ್ಡೆಯ ಸತ್ಯನಾರಾಯಣ ಕಟ್ಟೆಯ ಆವರಣದಲ್ಲಿ ಹಿಂದೂ ಯುವಕ ಮಂಡಲದ ವತಿಯಿಂದ 18 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

 ಕಳೆದ ಬಾರಿಯ ಮುದ್ದುಕೃಷ್ಣ ಸ್ಪರ್ಧೆಯ ವಿಜೇತ ಮಗು ಈ ಬಾರಿಯ ಮುದ್ದುಕೃಷ್ಣ ಸ್ಪರ್ಧೆಗೆ ಚಾಲನೆಯನ್ನು ನೀಡಿತು.

 ನಂತರ  ಮಂಗಳೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಅವರ  ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಉದ್ಯಮಿ ಶ್ರೀಧರ್ ಕೆ., ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಪ್ರಾಂಶುಪಾಲ ಸಂಗಬಸಯ್ಯ ಜಿ.ಹಿರೇಮಠ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ವಿಜೇತರಾಗಿರುವ ಪುಟಾಣಿಗಳಿಗೆ ಮತ್ತು ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿದರು. ಹಿಂದೂ ಯುವಕ ಮಂಡಲ ಗೋವುಗುಡ್ಡೆ ಕಲ್ಲಬೆಟ್ಟು ಇದರ ಅಧ್ಯಕ್ಷ ಸುಧೀರ್ ಪೈ ಉಪಸ್ಥಿತರಿದ್ದರು.


ಮುದ್ದು ಕೃಷ್ಣ ಸ್ಪರ್ಧೆಯ ವಿಜೇತರು: 0-2 ವರ್ಷ

ಚಾರ್ವಿಕ್ ಎಸ್.ಪೂಜಾರಿ (ಪ್ರಥಮ), ದೀಪಾಂಶ್ ಎಸ್.ಪೂಜಾರಿ (ದ್ವಿತೀಯ), ರಿದ್ವಿಕ್ ಎಸ್.ಪೂಜಾರಿ ತೃತೀಯ.


 2ರಿಂದ 5 ವರ್ಷದ ವಿಭಾಗ: ದಿತ್ಯಾ ಸಫಲ್ಯ (ಪ್ರಥಮ),ದಿಯೋನ್ ಆರ್.ಕೆ (ದ್ವಿತೀಯ) ಹಾಗೂ ಶ್ರುತಿಕಾ ಕಾಮತ್ ತೃತೀಯ ಬಹುಮಾನವನ್ನು ಗಳಿಸಿರುತ್ತಾರೆ.

ಮಹಿಳೆಯರಿಗೆ ಏರ್ಪಡಿಸಿದ್ದ ಮ್ಯೂಸಿಕಲ್ ಚೆಯರ್ ಸ್ಪರ್ಧೆಯಲ್ಲಿ ರಮ್ಯ ಸಂತೋಷ್ ಪ್ರಥಮ ಹಾಗೂ ಅನ್ನಪೂರ್ಣ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

  ಪುತ್ತಿಗೆ ಆಳ್ವಾಸ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಕ್ಷತಾ ಎ., ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಸುರಕ್ಷಾ ಹಾಗೂ  ಇನ್ನೋರ್ವ ಶಿಕ್ಷಕ ಗೋಪಾಲಕೃಷ್ಣ ಜಿ.ಕೆ ತೀರ್ಪುಗಾರರಾಗಿ ಸಹಕರಿಸಿದ್ದರು.

Post a Comment

0 Comments