ಮೂಡುಬಿದಿರೆ ಶ್ರೀ ಧವಳಾ ಕಾಲೇಜಿನ ಎನ್.ಎಸ್.ಎಸ್. ತಂಡ ಉದ್ಘಾಟನೆ
ಮೂಡುಬಿದಿರೆ ಶ್ರೀ ಧವಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ (NSS) 2023-24ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆದಿದ್ದು ಸುನಿಲ್ ಪಣಪಿಲ ಇವರು ಹೊಸ ಬ್ಯಾಚ್‌ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು "ರಾಷ್ಟ್ರೀಯ ಸೇವಾ ಯೋಜನೆಯ ತಂಡ ಕೇವಲ ಶ್ರಮದಾನ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗದೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಮುಂಚೂಣಿಗೆ ಬರಬೇಕು. ಈ ಮೂಲಕ ಪರಮ ವೈಭವದೆಡೆಗೆ ಸಾಗುತ್ತಿರುವ ದೇಶಕ್ಕೆ NSS ಕೊಡುಗೆ ನೀಡಬೇಕು" ಎಂದು ಹೇಳಿದರು.
ಸಮಾರಂಭದಲ್ಲಿ ದರೆಗುಡ್ಡೆ ಗ್ರಾಮ ಪಂಚಾಯತಿ ಸದಸ್ಯ ದೀಕ್ಷಿತ್ ಪಣಪಿಲ, ಕಾಲೇಜು ಪ್ರಾಂಶುಪಾಲರಾದ ಮಹಾವೀರ ಅಜ್ರಿ, ಶಿಬಿರಾಧಿಕಾರಿ ಸುದೀಪ್ ಬುಣ್ಣನ್ ಹಾಗೂ ಶಿಬಿರದ ನಾಯಕರು ಉಪಸ್ಥಿತರಿದ್ದರು.
0 Comments