ಮೂಡುಬಿದಿರೆ : ವೈಭವದ ಶೋಭಾಯಾತ್ರೆಯೊಂದಿಗೆ ವಜೃ ಮಹೋತ್ಸವದ ಗಣೇಶನ ವಿಸರ್ಜನೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ವೈಭವದ ಶೋಭಾಯಾತ್ರೆಯೊಂದಿಗೆ ವಜೃ ಮಹೋತ್ಸವದ ಗಣೇಶನ ವಿಸರ್ಜನೆ



ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಸಮಾಜ ಮಂದಿರದಲ್ಲಿ 5 ದಿನಗಳ ಕಾಲ ಪೂಜಿಸಲ್ಪ  ಗಣೇಶೋತ್ಸವದ ವಜ್ರ ಮಹೋತ್ಸವದ ಗಣೇಶನ ವಿಸರ್ಜನೆಯು ವೈಭವದ ಶೋಭಾಯಾತ್ರೆಯೊಂದಿಗೆ ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಮಾನಸ ಸರೋವರದಲ್ಲಿ ಭಾನುವಾರ ಮುಂಜಾನೆ ವಿಸರ್ಜನೆ ಮಾಡಲಾಯಿತು. ವಿವಿಧ ರೀತಿಯ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಸ್ವರಾಜ್ಯ ಮೈದಾನದಿಂದ ಮೂಡುಬಿದಿರೆ ಪೇಟೆಯ ಮೂಲಕ ಆಲಂಗಾರಿಗೆ ಹೊರಟ ಮೆರವಣಿಗೆಯು ಗಣೇಶನ ಭಕ್ತರನ್ನು ಮನಸೂರೆಗೊಳಿಸಿತು.

 ಸರ್ವೋದಯ ಫ್ರೆಂಡ್ಸ್, ಪವರ್ ಫ್ರೆಂಡ್ಸ್, ಬೆದ್ರ ಫ್ರೆಂಡ್ಸ್, ಮಾರಿಗುಡಿ ಫ್ರೆಂಡ್ಸ್  ಹಾಗೂ ಬೆದ್ರ ಇಲೆವೆನ್ ನ ಹುಲಿಗಳ ಅಬ್ಬರ ಹಾಗೂ ನಾಸಿಕ್ ಬ್ಯಾಂಡ್, ಭಜನಾ ತಂಡಗಳಿಂದ ಕುಣಿತ ಭಜನೆ,ಚೆಂಡೆ ಕುಣಿತ, ಕೀಲು ಕುದುರೆ, ಭಾರತ ಮಾತೆ, ಓಪನ್ ಜೀಪ್,  ಫ್ರೆಂಡ್ಸ್ ಇಲೆವೆನ್ ಬೆದ್ರ, ಜವನೆರ್ ಬೆದ್ರ ಫೌಂಡೇಶನ್, ದೊಡ್ಮನೆ ಫ್ರೆಂಡ್ಸ್ ಬೆದ್ರ, ಪುತ್ತಿಗೆ ಫ್ರೆಂಡ್ಸ್, ಜಿ.ಕೆ.ಡೆಕೋರೇಟರ್ಸ್, ಕೋಟೆಬಾಗಿಲು, ನ್ಯೂ ರವಿ ಇಂಡಸ್ಟ್ರೀಸ್ ವತಿಯಿಂದ ವಿವಿಧ ಸ್ತಬ್ಧ ಚಿತ್ರಗಳು ಗಮನ ಸೆಳೆದವು.



 ಮಹಿಳಾ ಹುಲಿಗಳು : ಈ ಬಾರಿಯ ಗಣೇಶೋತ್ಸವದಲ್ಲಿ ಬೆದ್ರ ಇಲೆವೆನ್ ತಂಡವು ಮಹಿಳಾ ಹುಲಿಗಳ ತಂಡವನ್ನು ಕುಣಿಸುವ ಮೂಲಕ ಪುರುಷ ಹುಲಿಗಳೊಂದಿಗೆ ಗಮನ ಸೆಳೆಯಿತು.

ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ  ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ.ಅವರು ಗಣೇಶನ ವಿಗ್ರಹವನ್ನು ಹೊತ್ತ ವಾಹನವನ್ನು ಚಲಾಯಿಸಿದರು.

Post a Comment

0 Comments