ಕೇಂದ್ರದ ಜನವಿರೋಧಿ ನೀತಿಯನ್ನು ಖಂಡಿಸಿ ಸಿಪಿಐಎಂನಿಂದ ಮೂಡುಬಿದಿರೆಯಲ್ಲಿ ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಕೇಂದ್ರದ ಜನವಿರೋಧಿ ನೀತಿಯನ್ನು ಖಂಡಿಸಿ ಸಿಪಿಐಎಂನಿಂದ ಮೂಡುಬಿದಿರೆಯಲ್ಲಿ ಪ್ರತಿಭಟನೆ




ಮೂಡುಬಿದಿರೆ: ನಮ್ಮ ದೇಶದಲ್ಲಿ ಹಿಂದುಗಳು ಬಹು ಸಂಖ್ಯಾತರಿದ್ದಾರೆ ಅದರಂತೆ ಅಲ್ಪಸಂಖ್ಯಾತರು, ಪಾರ್ಶಿಗಳು, ವಿವಿಧ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ.  ಭಾರತ ದೇಶ ಹೆಸರು ಇಡುವುದು ಹಿಂದೂ ರಾಷ್ಟ್ರದ ಭಾಗವಾಗಿ ಹೋಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಹಿಂದೂ ರಾಷ್ಟ್ರದ ಹೆಸರು ಇಡುವುದು ಸರಿಯಲ್ಲ ಹೆಸರು ಬದಲಾವಣೆಗೆ ಸಿಪಿಐಎಂನ ವಿರೋಧವಿದೆ ಎಂದು ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಹೇಳಿದರು.



 ಅವರು ಕೇಂದ್ರ ಸರಕಾರದ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಪ್ರತಿಭಟಿಸಿ ಮತ್ತು ಬೆಲೆ ಏರಿಕೆ, ನಿರುದ್ಯೋಗ, ವಿದ್ಯುತ್ ಖಾಸಗೀಕರಣ ವಿರೋಧಿಸಿ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆಯ ಅಂಗವಾಗಿ  ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. 

ಸರಕಾರದ ನೀತಿಗಳು ಸರಿಯಾಗಿರದಿದ್ದರೆ ಜನರು ಅಧೋಗತಿಗೆ ಹೋಗುತ್ತಾರೆ ದೇಶ ದಿವಾಳಿಯಾಗುತ್ತದೆ. ಟಾಟಾ, ಬಿರ್ಲಾ, ಅಂಬಾನಿ ಮುಂತಾದವರಲ್ಲಿ ಮಾನವೀಯತೆ ಇರುವುದಿಲ್ಲ ಅವರು ಲಾಭವನ್ನು ಮಾತ್ರ ನೋಡುತ್ತಾರೆ ಜನರ ಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ. ಜನರು ಸಮಸ್ಯೆಗಳನ್ನು ಅನುಭವಿಸುವುದಕ್ಕೂ ರಾಜಕೀಯಕ್ಕೂ ಸಂಬಂಧವಿದೆ. ಕಾರ್ಮಿಕರಿಗೆ ಕನಿಷ್ಟ ಕೂಲಿ, ರಸ್ತೆ, ಆರೋಗ್ಯ ಸಹಿತ ಜನರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳಾಗಬೇಕಿದೆ ಎಂದರು.

ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮಾತನಾಡಿ ದೇಶದಲ್ಲಿ 2014ರಿಂದ ಬಿಜೆಪಿ ಸರಕಾರದ ಆಡಳಿತದಿಂದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಅಕ್ಕಿ, ಬೇಳೆ, ಅಡುಗೆ ಅನಿಲ, ಪೆಟ್ರೋಲ್, ಡೀಸಿಲ್, ವಿದ್ಯುತ್, ಕೃಷಿ  ಹೂಡಿಕೆಗಳಾದ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳು, ನಾಗರಿಕರ ಆರೋಗ್ಯದ ಔಷಧಿ ಬೇಡಿಕೆಗಳು, ಶೈಕ್ಷಣಿಕ ಸೌಲಭ್ಯದ ಬೆಲೆಗಳು ವಿಪರೀತ ಏರಿಕೆಯಾಗಿದೆ ಎಂದರು.

ಸಿಪಿಐಎಂನ ಮೂಡುಬಿದಿರೆಯ ಕಾರ್ಯದರ್ಶಿ ರಮಣಿ ಅಧ್ಯಕ್ಷತೆ ವಹಿಸಿದ್ದರು.

 ಪುತ್ತಿಗೆ ಗ್ರಾ.ಪಂ.ಅಧ್ಯಕ್ಷೆ ರಾಧ,ಸಿಪಿಐಎಂ ನ ಮುಖಂಡರುಗಳಾದ ಕೃಷ್ಣಪ್ಪ ಕೊಣಾಜೆ, ಶಂಕರ ವಾಲ್ಪಾಡಿ ಮತ್ತು ಗಿರಿಜ ಉಪಸ್ಥಿತರಿದ್ದರು.

Post a Comment

0 Comments