ಹಿಂದೂ ಮುಖಂಡರ ಮೇಲೆ ಕೇಸು ದಾಖಲು : ಪೋಲಿಸ್ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.

ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರು : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ನಡೆದ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಹಿಳಾ ಜಾಗೃತಿ ಬಗ್ಗೆ ಭಾಷಣ ಮಾಡಿದ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹಾಗೂ ಜಿಲ್ಲಾ ಮುಖಂಡ ದಿನೇಶ್ ಮೆಂಡನ್ ಮೇಲೆ ಕೇಸು ದಾಖಲಿಸಿದ ಪೋಲಿಸ್ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.



ವೀಡಿಯೊ ಚಿತ್ರೀಕರಣ ಪ್ರಕರಣದಲ್ಲಿ ಕೇಸು ದಾಖಲಿಸಲು ಮೀನ ಮೇಷ ಎನಿಸಿದ ಪೋಲಿಸ್ ಇಲಾಖೆ, ಪ್ರತಿಭಟನೆ ನಡೆದ ತಕ್ಷಣ ಸಂಘಟನೆಯ ಪ್ರಮುಖರ ಮೇಲೆ ಕೇಸು ದಾಖಲಿಸಿ ಕಾಂಗ್ರೆಸ್ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದ ಸಮಾಜದಲ್ಲಿ ಸಾಮರಸ್ಯ ಕೆಡುತ್ತಿದೆ. ಗೋ-ಹಂತಕರ ವಿರುದ್ದ, ಮತಾಂತರಿಗಳ ವಿರುದ್ದ, ಲವ್ ಜಿಹಾದ್ ವಿರುದ್ದ, ಪಾಕ್ ಪರ ಘೊಷಣೆ ಹಾಕಿದವರ ವಿರುದ್ದ ಕ್ರಮ ಜರುಗಿಸುವುದು ಬಿಟ್ಟು ಧರ್ಮ ರಕ್ಷಣೆ ಕಾರ್ಯ ಮಾಡುವ ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಜರುಗಿಸುತ್ತಿರುವ ಪೋಲಿಸ್ ಇಲಾಖೆಯ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸುದರ್ಶನ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments