ಯಾರಿಗೂ ಹೇಳ್ಬೇಡ ಎಂದು ಹಿಂದೂ ಸಂಘಟನೆಯ ಯುವಕರಿಗೆ ನನ್ನ ಮೂಲಕ ಸಹಾಯ ಮಾಡಿದ ಏಕೈಕ ನಾಯಕ ನಳಿನ್: ಪ್ರವೀಣ್ ವಾಲ್ಕೆ
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಹಿಂದೂ ಮುಖಂಡ ಪ್ರವೀಣ್ ವಾಲ್ಕೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.
"ನಾನು ಅದೆಷ್ಟೋ ಹಿಂದೂ ಯುವಕರನ್ನು ನಳಿನ್ ಬಳಿ ಕರೆದುಕೊಂಡು ಹೋಗಿದ್ದೇನೆ. ಆ ಯುವಕರ ಪರಿಸ್ಥಿತಿಯನ್ನು ಹೇಳಿದ್ದೇನೆ. ಕೆಲವರ ಮನೆಯ ಪರಿಸ್ಥಿತಿ ತೀರಾ ಹಾಳಾಗಿದೆ. ಅವರಿಗೆಲ್ಲಾ ಆರ್ಥಿಕ ವ್ಯವಸ್ಥೆ ಮಾಡಿ ಯಾರಿಗೂ ಹೇಳ್ಬೇಡಿ ಎಂದಿದ್ದು ನಳಿನ್ ಕುಮಾರ್ ಕಟೀಲು. ಅವರಿಗೆ ಕಾರ್ಯಕರ್ತರ ನೋವಿನ ಬಗ್ಗೆ ಸ್ಪಷ್ಟ ಅರಿವಿದೆ. ಯಾಕೆಂದರೆ ಅವರೂ ಒಂದು ಕಾಲದಲ್ಲಿ ಆ ನೋವನ್ನು ಅನುಭವಿಸಿದವರು. ಅವರ ಮೇಲೂ ಸಾಕಷ್ಟು ಕೇಸುಗಳಿದ್ದವು. ಈಗಲೂ ಹಿಂದೂ ಕಾರ್ಯಕರ್ತರಿಗೆ ಸಹಾಯ ಮಾಡುತ್ತಾರೆ ಎಂದು ಅವರು ಆ ಹಾದಿಯನ್ನು ಮರೆತಿಲ್ಲ ಎಂದರ್ಥ"
ಇದು ಪ್ರವೀಣ್ ವಾಲ್ಕೆ ಆಡಿದ ಮಾತುಗಳು.
0 Comments