ಹೈವೇ ಕಾಮಗಾರಿ ಅವೈಜ್ಞಾನಿಕ ಬೆಳುವಾಯಿ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಆರೋಪ

ಜಾಹೀರಾತು/Advertisment
ಜಾಹೀರಾತು/Advertisment

 ಹೈವೇ ಕಾಮಗಾರಿ ಅವೈಜ್ಞಾನಿಕ ಬೆಳುವಾಯಿ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಆರೋಪ



ಮೂಡುಬಿದಿರೆ: ಬೆಳುವಾಯಿ ಮೈನ್ ಶಾಲೆಯ ಬಳಿ ಹೈವೇ ಯವರು ರಸ್ತೆ ಅಗೆದಿರುವುದರಿಂದ ಮಕ್ಕಳಿಗೆ ನಡೆದುಕೊಂಡು ಹೋಗಲು ಕಷ್ಟ ಸಾಧ್ಯವಾಗಿದೆ ಹಾಗೂ ತಡೆಗೋಡೆಯನ್ನು ನಿರ್ಮಿಸದೆ ತಗಡು ಶೀಟ್ ಹಾಕಿರುವುದರಿಂದ ಜೋರು ಮಳೆ ಬಂದರೆ ಬಿದ್ದು ಮಕ್ಕಳಿಗೆ ತೊಂದರೆಯಾಗುವ ಸಂಭವವಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಾಸ್ಕರ ಆಚಾರ್ಯ ಅವರು ಗ್ರಾಮಸಭೆಯಲ್ಲಿ  ಗಮನಕ್ಕೆ ತಂದರು.



ಅವರು ಗುರುವಾರ ನಡೆದ ಬೆಳುವಾಯಿ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಈ ಬಗ್ಗೆ ಮಾತನಾಡಿದರು. ಹೈವೇಯ ಎಂಜಿಯರ್  ಸಿದ್ಧಾರ್ಥ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಶಾಲೆಯಲ್ಲಿ 400ಕ್ಕಿಂತ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ತಮ್ಮನ್ನು ಕರೆದು ತಡೆಗೋಡೆಯನ್ನು ನಿರ್ಮಿಸಿಕೊಂಡುವಂತೆ ಕೇಳಿಕೊಂಡಾಗ ತಾವು ಒಕೆ ಎಂದು ಹೇಳಿದ್ದೀರಿ ಆದರೆ ಈವರೆಗೆ ಕಾಮಗಾರಿಯನ್ನು ಆರಂಭಿಸಿಲ್ಲವೆಂದು ಆರೋಪಿಸಿದರು. 




 ಕಾಮಗಾರಿ ಅವೈಜ್ಞಾನಿಕವಾಗಿಲ್ಲ ಸರಿಯಾಗಿ ನಡೆಯುತ್ತಿದೆ. ಸ್ವಲ್ಪ ದಿನಗಳಲ್ಲಿ ತಡೆಗೋಡೆಯನ್ನು ನಿರ್ಮಿಸಿಕೊಡುತ್ತೇವೆ ಎಂದು ಎಂಜಿನಿಯರ್ ಉತ್ತರಿಸಿದರು.

 ಬೆಳುವಾಯಿ ಮುಗೇರಕಲ ಬಳಿ ಸುಮಾರು ಐದಾರು ಕುಟುಂಬಗಳಿದ್ದು ಅಲ್ಲಿಗೆ ಹೋಗಲು ದಾರಿಯಿಲ್ಲ ಈ ಹಿಂದೆ ಇದ್ದ ದಾರಿಗೆ ತಡೆಯನ್ನು ಹಾಕಿರುವುದರಿಂದ ನಡೆದುಕೊಂಡು ಹೋಗಲು ತೊಂದರೆಯಾಗಿದೆ ಎಂದು ಪರಿಸರದ ನಿವಾಸಿಗಳು ಪಂಚಾಯತ್ ಗಮನಕ್ಕೆ ತಂದರು. ಇದು ಖಾಸಗಿ ಜಾಗ ಆಗಿರುವುದರಿಂದ ಬೇಲಿಯನ್ನು ಹಾಕಲಾಗಿದೆ ಈ ಬಗ್ಗೆ ತಾನು ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದೇನೆ ಆದರೆ ಎಲ್ಲೂ ನ್ಯಾಯ ಸಿಗುತ್ತಿಲ್ಲವೆಂದು  ಅಧಿಕಾರಿಗಳಿಗೆ ತಿಳಿಸಿದರು.

  ಲೋಕಾಯುಕ್ತ ಸಹಿತ ಎಲ್ಲಾ ಇಲಾಖೆಗಳಿಗೂ ತಾವು ಈ ಬಗ್ಗೆ ದೂರು ನೀಡಿದ್ದೀರಿ ಶೆಟ್ರೆ ಮುಂದಿನ ವಾರ ಜಾಗವನ್ನು ಸರ್ವೆ ಮಾಡಲಿದೆ ಆಗ ಜಾಗ ಯಾರದು ಎಂಬ ಬಗ್ಗೆ ತಿಳಿಯುತ್ತದೆ ಎಂದು ಗ್ರಾಮಕರಣಿಕ ಕಿಶೋರ್ ಅವರು ಉತ್ತರಿಸಿದರು.

 ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ರತಿ ಅವರು ಮಾತನಾಡಿ ಪಕ್ಕದ ಪಂಚಾಯತ್ ವ್ಯಾಪ್ತಿಯಲ್ಲಿ ಹುಡುಗನೊಬ್ಬ 21 ವರ್ಷ ತುಂಬುವ ಮೊದಲೇ ತನಗಿಂತ ಪ್ರಬುದ್ಧ ವಯಸ್ಸಿನ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಹೆಣ್ಣಿನ ಮನೆಯವರ ಕಡೆಯಿಂದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸುತ್ತಿದ್ದಾನೆ ಈ ಬಗ್ಗೆ ಇಲಾಖೆಯು ಕ್ರಮಕೈಗೊಂಡಿದೆ. ಈ  ಪಂಚಾಯತ್ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆಯುವ ಹಂತದಲ್ಲಿದ್ದರೆ ಅದನ್ನು ತಡೆಯುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಿದರು‌.

  ಅಂಗನವಾಡಿಗೆ ಮಕ್ಕಳು ಸರಿಯಾಗಿ ಹೋಗುತ್ತಿಲ್ಲ ಈ ಬಗ್ಗೆ ಯಾಕೆ ಕ್ರಮಕೈಗೊಳ್ಳುತ್ತಿಲ್ಲವೆಂದು ಪಂಚಾಯತ್ ಸದಸ್ಯ ಭರತ್ ಶೆಟ್ಟಿ ಪ್ರಶ್ನಿಸಿದರು.

 6ರಿಂದ 14 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಬೇಕು ಆದರೆ ಅಂಗನವಾಡಿಗೆ  ಕಳಿಸಲೇಬೇಂಕೆಂಬ ಕಡ್ಡಾವಿಲ್ಲ ಆದರೆ ಮಕ್ಕಳನ್ನು ಕಳಿಸಿದರೆ ಉತ್ತಮ ಎಂದರು.

  ಕಳೆದ ಒಂದು ವರ್ಷದ ಹಿಂದೆ 1000  ಬರುತ್ತಿದ್ದ ತೆರಿಗೆ ಬಿಲ್ಲ್ ಈ ವರ್ಷ 2000 ಬಂದಿದೆ ತಾವು ಹೇಗೆ ಪರ್ಸಟೇಂಜ್ ಮೂಲಕ ತೆರಿಗೆಯನ್ನು ಹೆಚ್ಚಿಸಿರುವೀರಾ..? ಈ ಬಗ್ಗೆ ನಿರ್ಣಯ ಮಾಡಲಾಗಿದೆಯೇ ಎಂದು ಅರವಿಂದ ಆಚಾರ್ಯ ಅವರು ಪ್ರಶ್ನಿಸಿದರು. ಕಳೆದ 12 ವರ್ಷಗಳಿಂದ ತೆರಿಗೆಯನ್ನು ಪರಿಷ್ಕರಣೆ ಮಾಡಿಲ್ಲ ಈ ಬಾರಿ ಸರಕಾರದ ನಿಯಮದಂತೆ ಸಾಮಾನ್ಯಸಭೆಯಲ್ಲಿ ನಿರ್ಣಯ ಮಾಡಿ ಪರಿಷ್ಕರಣೆ ಮಾಡಲಾಗಿದೆ ಎಂದು ಪಿಡಿಒ ಸುನೀತಾ ಅವರು ತಿಳಿಸಿದಾಗ ಪರಿಷ್ಕರಣೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲವೆಂದು ಸದಸ್ಯರೋರ್ವರು ತಿಳಿಸಿದಾಗ ಪಿಡಿಒ ಮತ್ತು ಸದಸ್ಯರ ಮಧ್ಯೆ ಮಾತಿನ ಚಕಾಮಕಿ ನಡೆಯಿತು.


  ಫ್ಲ್ಯಾಟ್ ಮತ್ತು ಮನೆಯವರು ತಮ್ಮ ಮನೆಯಲ್ಲಿ ಶೇಖರಣೆಯಾಗುವ ಕಸಗಳನ್ನು ಅಳಿಯೂರು ರಸ್ತೆ ಬದಿಗಳಲ್ಲಿ ತಂದು ಸುರಿಯುತ್ತಿದ್ದಾರೆ ಇದನ್ನು‌ ಪತ್ತೆ ಹಚ್ಚಲು ಸಿಸಿ ಕೆಮರಾಗಳನ್ನು ಅಳವಡಿಸಬೇಕೆಂದು‌ ಅರವಿಂದ್ ಅವರು ಸಲಹೆ ನೀಡಿದರು. ಕಸ ತಂದು ಸುರಿಯುವಾಗ ಯಾರಾದರೂ ನೋಡಿದರೆ ಪಂಚಾಯತ್ ಗಮನಕ್ಕೆ ತನ್ನಿ ಅವರ ವಿರುದ್ಧ  ಕ್ರಮಕೈಗೊಳ್ಳುತ್ತೇವೆ ಮಾಹಿತಿ ನೀಡುವವರು ಬಗ್ಗೆ ಗೌಪ್ಯತೆಯನ್ನು ಕಾಪಾಡುತ್ತೇವೆಂದು ತಿಳಿಸಿದರು.

  ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿ ಯುಗೇಂದ್ರ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Post a Comment

0 Comments