ಮೂಡಬಿದ್ರಿ ತಾಲೂಕಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ

ಜಾಹೀರಾತು/Advertisment
ಜಾಹೀರಾತು/Advertisment

 ತಾಲೂಕಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ



ಮೂಡುಬಿದಿರೆ ತಾಲೂಕಿನ ವಿವಿಧ ಗ್ರಾಮ ಪಂಚಾಯತುಗಳ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಗೊಂಡಿದೆ.


ಆ. 17ರಂದು ಪಾಲಡ್ಕ, ಪುತ್ತಿಗೆ, ಪಡುಮಾರ್ನಾಡು ಪಂಚಾಯತ್ ಗಳಿಗೆ, ಆ.18ರಂದು ದರೆಗುಡ್ಡೆ ಕಲ್ಲಮುಂಡ್ಕೂರು, ತೆಂಕಮಿಜಾರು ಪಂಚಾಯತ್‌ಗಳಿಗೆ, ಆ.19ರಂದು ನೆಲ್ಲಿಕಾರು, ಬೆಳುವಾಯಿ, ಹೊಸಬೆಟ್ಟು ಪಂಚಾಯತ್‌ಗಳಿಗೆ ದಿನ ನಿಗದಿ ಪಡಿಸಲಾಗಿದೆ.

ಉಳಿದಂತೆ ಇರುವೈಲು, ಶಿರ್ತಾಡಿ, ವಾಲ್ಪಾಡಿ ಪಂಚಾಯತ್‌ಗಳಿಗೆ ಇನ್ನಷ್ಟೇ ದಿನ ನಿಗದಿಪಡಿಸಬೇಕಾಗಿದ್ದು ಪಿಡಬ್ಲ್ಯೂಡಿ ಅಸಿಸ್ಟೆಂಟ್ ಇಂಜಿನಿಯರ್ ಶ್ರೀಕಾಂತ್ ಭಟ್ ಚುನಾವಣಾಧಿಕಾರಿಯಾಗಿದ್ದಾರೆ.

ನೆಲ್ಲಿಕಾರು, ದರೆಗುಡ್ಡೆ, ಪಡುಮಾರ್ನಾಡು ಪಂಚಾಯತ್‌ಗಳಿಗೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ, ಬೆಳುವಾಯಿ, ಪಾಲಡ್ಕ, ಕಲ್ಲಮುಂಡ್ಕೂರು ಪಂಚಾಯತುಗಳಿಗೆ ಪುರಸಭಾ ಮುಖ್ಯಾಧಿಕಾರಿ ಶಿವ ನಾಯ್ಕ, ಪುತ್ತಿಗೆ, ತೆಂಕಮಿಜಾರು, ಹೊಸಬೆಟ್ಟು ಪಂಚಾಯತ್‌ಗಳಿಗೆ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಚುಣಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Post a Comment

0 Comments