ಪೊಲೀಸ್ ಕಾರ್ಯಾಚರಣೆ ಬೈಕ್ ಕಳ್ಳತನ ಮಹಿಳೆಯ ಕತ್ತಿನಿಂದ ಚಿನ್ನ ಎಗರಿಸಿದ ಆರೋಪಿಗಳ ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ:ಕೆಲವು ದಿನಗಳ ಹಿಂದೆ ಇಲ್ಲಿನ ಕೊಡಂಗಲ್ಲಿನಲ್ಲಿ ಮನೆ ಆವರಣದಲ್ಲಿದ್ದ ಬೈಕ್ ಕಳ್ಳತನ ಹಾಗೂ ಪಡುಮಾರ್ನಾಡಿನಲ್ಲಿ ಮಹಿಳೆಯ ಕತ್ತಿನಿಂದ ಚಿನ್ನ ಎಗರಿಸಿದ ಆರೋಪಿಗಳು ಸುರತ್ಕಲ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.


ಬಂಧಿತ ಆರೋಪಿಗಳು ಮಂಗಳೂರು  ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯ ಹಬೀಬ್ ಹಸನ್ ಯಾನೆ ಹಬ್ಬಿ(42) ಹಾಗೂ ಉಳ್ಳಾಲದ ಬೈತುಲ್ ಕೌಶಾರ್ ನ್ಯೂತೋಟದ ಮೊಹ್ಮದ್ ಫೈಝಲ್ ಎಂದು ತಿಳಿದುಬಂದಿದೆ. ಆರೋಪಿಗಳು ಇತ್ತೀಚೆಗೆ ರಾತ್ರಿ  ಕರಿಂಜೆ ಗ್ರಾಮದ ಕೊಡಂಗಲ್ಲು ರತ್ನಾಕರ ಹೆಗಡೆಕಟ್ಟೆ ಅವರ ಮನೆ ಆವರಣದಲ್ಲಿದ್ದ ಬೈಕನ್ನು ಕಳವು ಮಾಡಿದ್ದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಇದೇ ಆರೋಪಿಗಳು ಮರು ದಿನ ಸುರತ್ಕಲ್‍ನಲ್ಲಿ ಚಿನ್ನ ಕಳ್ಳತನ ಪ್ರಕರಣದಲ್ಲಿ ಸುರತ್ಕಲ್ ಪೊಲೀಸರಿಗೆ ಸಿಕ್ಕಿಬಿದ್ದದ್ದರು. ಕೊಡಂಗಲ್ಲಿನಲ್ಲಿ ಕಳವು ಮಾಡಿದ ಬೈಕನ್ನು ಸುರತ್ಕಲ್‍ನಲ್ಲಿ ನಡೆಸಿದ ಕೃತ್ಯಕ್ಕೆ ಬಳಕೆ ಮಾಡಿದ್ದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಕೋರ್ಟ್‍ನಿಂದ ಬಾಡಿ ವಾರಂಟ್ ಮೂಲಕ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳವಾದ ಬೈಕನ್ನು ಸ್ವಾಧಿನಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Post a Comment

0 Comments