ಎರಡನೇ ಬಾರಿ ಉದ್ಘಾಟನೆಯ ಭಾಗ್ಯ ಇರುವೈಲು ಗ್ರಾ.ಪಂ.ಕಛೇರಿಗೆ...?

ಜಾಹೀರಾತು/Advertisment
ಜಾಹೀರಾತು/Advertisment

 ಎರಡನೇ ಬಾರಿ  ಉದ್ಘಾಟನೆಯ ಭಾಗ್ಯ  ಇರುವೈಲು ಗ್ರಾ.ಪಂ.ಕಛೇರಿಗೆ...?





ಮುಡುಬಿದಿರೆ : ವಿರೋಧ ಪಕ್ಷದ ಸದಸ್ಯರ ವಿರೋಧದ ಮಧ್ಯೆ ಪೊಲೀಸ್ ಬಂದೋಬಸ್ತಿನೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಶಾಸಕ ಉಮಾನಾಥ  ಕೋಟ್ಯಾನ್ ಅವರು ದೀಪ ಬೆಳಗಿಸುವ ಮೂಲಕ ಸರಳ ರೀತಿಯಲ್ಲಿ ಮಂಗಳವಾರ ಉದ್ಘಾಟನೆಗೊಂಡಿರುವ ಇರುವೈಲು ಗ್ರಾ.ಪಂ.ನ ನೂತನ ಕಟ್ಟಡವು ಇದೀಗ ಮತ್ತೊಮ್ಮೆ ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಇದೀಗ ಪಂಚಾಯತ್ ಅಧ್ಯಕ್ಷರಾಗಿರುವ ವಲೇರಿಯಲ್ ಕುಟಿನ್ಹ ಅವರ ಅಧ್ಯಕ್ಷ ಅವಧಿಯು ನಾಳೆ( ಗುರುವಾರ)ಗೆ ಮುಗಿಯಲಿದೆ. ನಂತರ ದಲಿತ ಸಮುದಾಯಕ್ಕೆ ಸೇರಿರುವ ಮಹಿಳೆಯು ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದು ಈ ಸಂದರ್ಭ  ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಂದ ಉದ್ಘಾಟನೆಗೊಳಿಸಲು ವಿರೋಧ ಪಕ್ಷದವರು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

 ಮೊದಲಿಗೆ ಕಳೆದ ತಿಂಗಳು 31ನೇ ತಾರೀಕಿಗೆ ಪೂರ್ವತಯಾರಿಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಸಿದ್ಧತೆ ಪೂರ್ಣಗೊಂಡಿದ್ದರೂ ಪ್ರೊಟೊಕಾಲ್ ಕಾರಣದಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹರ್ಣಾಧಿಕಾರಿಯವರ ಅಮಾನತುಗೊಳಿಸಲಾಗಿತ್ತು. ಹಳೆಯ ಆಮಂತ್ರಣಕ್ಕೆ ದಿನಾಂಕವನ್ನು ಬದಲಾಯಿಸಿ ಆ.8ರಂದು ಕಟ್ಟಡ ಉದ್ಘಾಟಿಸಲು ಮುಂದಾಗಿತ್ತು. 


ಆದರೆ ಸೋಮವಾರ ಸಂಜೆಯಿಂದಲೇ ಸರ್ವಪಕ್ಷೀಯರ ಮತ್ತು ಗ್ರಾಮದ ಜನರ ವಿಶ್ವಾಸ ಪಡೆದುಕೊಳ್ಳದೆ ತುರ್ತಾಗಿ  ನೆರೆವೇರಿಸುತ್ತಿರುವುದಕ್ಕೆ  ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಗ್ರಾಮದ ಸರ್ವಪಕ್ಷೀಯ ಜನರನ್ನು ಮತ್ತು ಹಿರಿಯ ಪ್ರಮುಖ ನಾಗರಿಕರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಕಟ್ಟಡವನ್ನು ಉದ್ಘಾಟನೆ ಮಾಡುವುದು ಒಳಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ ಸಂಬಂಧಪಟ್ಟ ಇಲಾಖೆಯು ಪಂಚಾಯತ್ ಅಧ್ಯಕ್ಷರಿಗೆ ಕರೆ ಮಾಡಿ ಉದ್ಘಾಟನೆ ಮಾಡಬೇಡಿ ಎಂಬ ಸೂಚನೆಯನ್ನೂ ನೀಡಿತ್ತು ಎನ್ನಲಾಗಿದೆ. ಇದು ಆಡಳಿತ ಪಕ್ಷಕ್ಕೆ ಸ್ವಪ್ರತಿಷ್ಟೆ ಎಂಬಂತ್ತಾಗಿದ್ದು . 


  ಇದಲ್ಲದೆ ಗ್ರಾ.ಪಂ. ಕಟ್ಟಡ ಉದ್ಘಾಟನೆಯಾಗುವುದಿಲ್ಲ ಎಂಬ ಸುದ್ದಿಯೂ ಹಬ್ಬಿತ್ತು. ಇಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಯಾವುದೇ ಅಹಿತರ ಘಟನೆಗಳು ನಡೆಯಬಾರದೆಂಬ ನಿಟ್ಟಿನಲ್ಲಿ  ಪೊಲೀಸ್ ಅಧಿಕಾರಿಗಳು ತಮ್ಮ ಸಿಬಂದಿಗಳೊಂದಿಗೆ ಬೆಳಿಗ್ಗೆ 6 ಗಂಟೆಯ ವೇಳೆಗೆ ಜಮಾಯಿಸಿದ್ದರು.  


  ಈ ಎಲ್ಲಾ ಗೊಂದಲ, ವಿರೋಧದ ಮಧ್ಯೆ ಬೆಳಿಗ್ಗೆ 10.50ರ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಗಮಿಸಿ ನೂತನ ಗ್ರಾ.ಪಂ.ಕಟ್ಟಡದ ಬಳಿಗೆ ಬಂದು ಬಾಗಿಲು ತೆಗೆಸಿ ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ ಅವರ ಅಧ್ಯಕ್ಷತೆಯೊಂದಿಗೆ ನಂತರ ದೀಪ ಬೆಳಗಿಸಿ ಕಟ್ಟಡವನ್ನು ಉದ್ಘಾಟಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿ ತಾನು ನೂತನ ಕಟ್ಟಡವನ್ನು ಉದ್ಘಾಟಿಸಿದ್ದೇನೆ ಎಂದು ತಿಳಿಸಿದ್ದರು.


 ಆದರೆ ಇದೀಗ ಮತ್ತೊಮ್ಮೆ ಎರಡನೇ ಬಾರಿ ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮೀಣ ಅಭಿವೃದ್ಧಿ ಸಚಿವರು ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ.

Post a Comment

0 Comments