ಪುತ್ತಿಗೆ ಗ್ರಾಮಸಭೆ
"ಬ್ಲ್ಯಾಕ್ ಸ್ಫೋಟ್ "ಗಳಲ್ಲಿ ಸಿಸಿ ಕೆಮರಾ ಕಣ್ಗಾವಲು
*ರಸ್ತೆ ಬದಿಗಳಲ್ಲಿ ಕಸ ಬೀಸಾಡುವವರಿಗೆ ದಂಡ : ಪಿಡಿಒ ಭೀಮಾ ನಾಯ್ಕ್ ಎಚ್ಚರಿಕೆ
ಮೂಡುಬಿದಿರೆ : ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ರಾಶಿಗಳನ್ನು "ಬ್ಲ್ಯಾಕ್ ಸ್ಫೋಟ್ " ಗಳೆಂದು ಗುರುತಿಸಲಾಗಿದ್ದು ಇಲ್ಲಿ 20 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಇನ್ನು ಮುಂದೆ ರಸ್ತೆ ಬದಿಗಳಲ್ಲಿ ಕಸ ತಂದು ಹಾಕುವವರ ವಿರುದ್ಧ ಕಾನೂನು ಕ್ರಮಕೈಗೊಂಡು ದಂಡ ವಿಧಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯ್ಕ್ ಗ್ರಾಮಸಭೆಯಲ್ಲಿ ಎಚ್ಚರಿಸಿದ್ದಾರೆ.
ಅವರು ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪಂಚಾಯತ್ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಗ್ರಾಮಸ್ಥರ ಗಮನಕ್ಕೆ ತಂದರು. ಗ್ರಾಮಸ್ಥ ಪ್ರಶಾಂತ್ ಭಂಡಾರಿ ಅವರು ಗ್ರಾಮಸಭೆಯಲ್ಲಿ ಮಾತನಾಡಿ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ತುಂಬಿರುವ ತ್ಯಾಜ್ಯದ ರಾಶಿಯ ಬಗ್ಗೆ ಗಮನ ಸೆಳೆದಾಗ ಪಿಡಿಒ ಸಿಸಿ ಕೆಮರಾ ಅಳವಡಿಸಿರುವ ಬಗ್ಗೆ ತಿಳಿಸಿ ಈಗ ಕಸ ಬೀಳುವುದು ಕಡಿಮೆಯಾಗುತ್ತಿದೆ ಎಂದರು.
ಹಂಡೇಲಿನಲ್ಲಿ ಸಿಮೆಂಟ್ ಮಿಕ್ಸಿಂಗ್ ಘಟಕ ಶೇ.90ರಷ್ಟು ಆಗಿದೆ. ಇದು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತದೆ. ಇದಕ್ಕೆ ತಡೆಯೊಡ್ಡಬೇಕು ಎಂದು ತುಳು ಕೂಟ ಬೆದ್ರದ ಅಧ್ಯಕ್ಷ, ಗ್ರಾಮಸ್ಥರಾದ ಧನಕೀರ್ತಿ ಬಲಿಪ ಪಂಚಾಯತ್ ಗಮನಕ್ಕೆ ತಂದರು.
. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದಲ್ಲಿ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಡುವುದಿಲ್ಲ. ಊರಿನವರ ದೂರನ್ನು ಮುಂದೆ ಅವರು ಉದ್ಯಮ ಪರವಾನಿಗೆ ಕೇಳುವಾಗ ಗ್ರಾಮಸ್ಥರ ಆಕ್ಷೇಪಗಳನ್ನು ಪರಿಶೀಲಿಸುತ್ತೇವೆ ಎಂದು ಪಿಡಿಒ ಉತ್ತರಿಸಿದರು.
ಎಪಿಎಂಸಿ ಮಾಜಿ ಸದಸ್ಯ ವಾಸುದೇವ ನಾಯಕ್ ಮಾತನಾಡಿ ವ್ಯಾಪಾರ ಪರವಾನಿಗೆ ಪಡೆಲು ಹೊಸ ನಿಯಮಗಳು ಅಡಿಯಾಗುತ್ತಿರುವುದರಿಂದ ಹೊಸ ವ್ಯಾಪಾರ ಉದ್ದಿಮೆ ನಡೆಸಲು, ಬ್ಯಾಂಕ್ ಸಾಲ ಪಡೆಯಲು ಕಷ್ಟವಾಗುತ್ತಿದೆ. ಪಂಚಾಯಿತಿಗೂ ಆದಾಯ ನಷ್ಟ. 2012 ಮೊದಲೇ ಇರುವ ಕಟ್ಟಡಗಳಿಗೆ ಈ ಹೊಸ ನಿಯಮಗಳಿಂದ ವಿನಾಯಿತಿ ಕೊಡಬೇಕು. ಆ ಬಳಿಕದ ಹೊಸ ಕಟ್ಟಡಗಳಿಗೆ ನಿಯಮ ಪಾಲನೆ ಮಾಡುವಂತಾಗಬೇಕು. ಇದು ಇಡೀ ರಾಜ್ಯದಲ್ಲಿ ಜಾರಿಗೆ ಬರುವಂತೆ ಪಿಡಿಒಗಳು ಸರ್ಕಾರದ ಗಮನಕ್ಕೆ ತರಬೇಕು ಎಂದರು.
ಪಡಿತರ ಚೀಟಿ ಅವ್ಯವಸ್ಥೆಯಿಂದಾಗಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಪಿಡಿಒ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕೆಂಪು ಕಲ್ಲಿನ ಕೋರೆಗಳು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಚರಿಸುತ್ತಿದ್ದು, ರಸ್ತೆಗಳು ತೀವ್ರ ಹದಗೆಟ್ಟಿವೆ. ಅವರಣ ಬೇಲಿ ಇಲ್ಲದೇ ಇರುವುದರಿಂದ ಅಪಾಯಕಾರಿ ಸನ್ನಿವೇಶವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಮಸ್ಥ ಅಚ್ಯುತ ಸಂಪಿಗೆ ಅವರು ಎಸ್‌ಸಿಎಸ್‌ಟಿ ಅನುದಾನದ ವಿವರಗಳನ್ನು ಕೇಳಿದರು. ಕಚೇರಿಯಲ್ಲಿ ಈ ಪಟ್ಟಿ ಸಿದ್ಧವಿದ್ದು, ತಾವು ಪಡೆಯಬಹುದು ಎಂದು ಪಿಡಿಒ ಹೇಳಿದರು.
ಪರಿಶ್ರಮಪಟ್ಟು ಗ್ರಾಮಕ್ಕೆ ತಂದಿರುವ ಇಸಿಜಿ ಮೆಶಿನ್ ಸಂಪಿಗೆಯಲ್ಲಿದೆ. ಅದು ಉಪಯೋಗಕ್ಕೆ ಬಾರದೆ ಒಂದುವರೆ ವರ್ಷವಾಗಿದೆ. ಇದನ್ನ ಒದಗಿಸಲು ಕಾರಣರಾದ ಡಾ.ಪದ್ಮನಾಭ್ ಕಾಮತ್ ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು, ಇತರ ರಾಜ್ಯಗಳಿಂದ ನಮ್ಮೂರಿಗೆ ಬಂದು ದುಡಿಯುತ್ತಿರುವ ಕೂಲಿ ಕಾರ್ಮಿಕರುಗಳ ಬಗ್ಗೆ ಪಂಚಾಯತ್ ಮಾಹಿತಿಯನ್ನು ಸಂಗ್ರಹಿಸುವಂತೆ ಪ್ರಶಾಂತ್ ಭಂಡಾರಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಇಸಿಜಿಯನ್ನು ಗುಡ್ಡೆಯಂಗಡಿ ಉಪಕೇಂದ್ರಕ್ಕೆ ವರ್ಗಾಯಿಸುವ ಎಂದು ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹೇಳಿದರು.
ಸಂಪಿಗೆ ಆರೋಗ್ಯಕೇಂದ್ರದ ಸುತ್ತಮುತ್ತ ಸ್ವಚ್ಛತೆ ಇಲ್ಲದೆ ಸಮಸ್ಯೆಯಾಗಿದೆ. ಸ್ಥಳೀಯ ಹೊಟೇಲ್‌ನ ಕೊಳಚೆ ನೀರು ಈ ಪ್ರದೇಶದಲ್ಲಿ ಹರಿದಾಡುತ್ತದೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ರೋಶನ್ ಒತ್ತಾಯಿಸಿದರು.
ಸರಕಾರಿ ಶಾಲೆಗಳನ್ನು ಉಳಿಸಲು ಗ್ರಾಮಸ್ಥರು ಸಹಕಾರ ನೀಡಬೇಕೆಂಬುದರ ಬಗ್ಗೆಯೂ ಚರ್ಚೆ ನಡೆಯಿತು. ಕಂಚಿಬೈಲ್ ನಲ್ಲಿ ತುಂಬಿರುವ ಹೂಳನ್ನು ಯಾವುದೇ ಖರ್ಚಿಲ್ಲದೆ ತೆಗೆದು ಮಾರಾಟ ಮಾಡಿ ಜಲಸಂಪನ್ನು ವೃದ್ಧಿಸಬಹುದು ಈ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಒಂದು ದಿನ ಕಾರ್ಯಾಗಾರವನ್ನು ಆಯೋಜಿಸಿ ಮಾಹಿತಿ ಪಡೆದುಕೊಂಡರೆ ಪಂಚಾಯತ್ ಗೆ ಲಾಭವಾಗಬಹುದು ಎಂದು ಪತ್ರಕರ್ತ ಧನಂಜಯ ಮೂಡುಬಿದಿರೆ ಅವರು ಸಲಹೆ ನೀಡಿದರು. ಇದಕ್ಕಾಗಿ ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು ಎಂದು ಪಿಡಿಒ ತಿಳಿಸಿದರು.
ಕೃಷಿ ಅಧಿಕಾರಿ ವಿ.ಎಸ್ ಕುಲಕರ್ಣಿ ನೋಡೆಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ತಾಹೀರಾಭಾನು, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಸಹಿತ ಮಾಹಿತಿಯನ್ನು ನೀಡಿದರು. ಉಪಸ್ಥಿತರಿದ್ದರು.
0 Comments