ಕನ್ನಡ ಭವನದಲ್ಲಿ ಕನ್ನಡ ಭಾಷಾ ಬೋಧನೆ ಕಾರ್ಯಾಗಾರಕ್ಕೆ ಚಾಲನೆ
ಮೂಡುಬಿದಿರೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ, ವನಜಾಕ್ಷಿ ಚಾರಿಟೆಬಲ್ ಟ್ರಸ್ಟ್ ಇವುಗಳ ಆಶ್ರಯದಲ್ಲಿ ತಾಲೂಕಿನ ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕನ್ನಡ ಭಾಷಾ ಶಿಕ್ಷಕರಿಗಾಗಿ ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ಸಭಾಂಗಣದಲ್ಲಿ ಕನ್ನಡ ಭಾಷಾ ಬೋಧನೆ ಕುರಿತು ಕಾರ್ಯಾಗಾರ ಬುಧವಾರ ಬೆಳಿಗ್ಗೆ ಆರಂಭಗೊಂಡಿತು.
ಮಾಜಿ ಸಚಿವ ಅಭಯಚಂದ್ರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ ಕನ್ನಡ ಭಾಷೆ ನಮ್ಮ ಮಾತೃ ಭಾಷೆ ಇದರ ಬಗ್ಗೆ ಒಲವು ಎಲ್ಲರಿಗೂ ಇರಬೇಕು. ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸ ಶಿಕ್ಷಕರಿಂದಾಗಬೇಕು ಅದಕ್ಕಾಗಿ ಮೊದಲಿಗೆ ಕನ್ನಡ ಭಾಷಾ ಶಿಕ್ಷಕ-ಶಿಕ್ಷಕಿಯರಿಗೆ ಕನ್ನಡ ವ್ಯಾಕರಣದ ಬಗ್ಗೆ ಜ್ಞಾನವಿರಬೇಕು ಮತ್ತು ಓದುವ ಹವ್ಯಾಸವೂ ಇರಬೇಕು ಎಂದು ಹೇಳಿದ ಅವರು ನಮ್ಮ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆಯಲ್ಲೇ ಸಹಿ ಹಾಕುತ್ತಿದ್ದು ಅವರಿಗೆ ಕನ್ನಡ ಭಾಷೆಯ ಬಗ್ಗೆ ಇರುವ ಪ್ರೀತಿಯನ್ನು ತಿಳಿಸಿದರು.
ಕ.ಸಾ.ಪ.ಘಟಕಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣ ಅಧಿಕಾರಿ ಡಾ|ಬಿ. ರಾಜಶ್ರೀ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಮಕೃಷ್ಣ ಶಿರೂರು,ಸಾಹಿತಿ ಸದಾನಂದ ನಾರಾವಿ ಉಪಸ್ಥಿತರಿದ್ದರು.
ಘಟಕದ ಗೌರವ ಕೋಶಾಧ್ಯಕ್ಷ ಅಂಡಾರು ಗುಣಪಾಲ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments