ಮಂಗಳೂರಿಗೆ ಮತ್ತೆರಡು ಗುಡ್ ನ್ಯೂಸ್ ನೀಡಿದ ಸಂಸದರು:2 ರೈಲು ನಿಲ್ದಾಣಗಳ ನೀಲ ನಕಾಶೆ ರೆಡಿ
ಇತ್ತೀಚಿಗೆ, ಅಂದರೆ ಆಗಸ್ಟ್ 6 ರಂದು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ನೂತನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ರವರು ಶಂಕುಸ್ಥಾಪನೆ ನೆರವೇರಿಸಿದ್ದು ಇದೀಗ ಮತ್ತೆ ಎರಡು ರೈಲ್ವೆ ನಿಲ್ದಾಣದ ನೀಲನಕಾಶೆ ತಯಾರಾಗಿದೆ.
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದ ಸಂಸದರು ಶೀಘ್ರದಲ್ಲೇ ಮತ್ತೆ ಮೂರು ರೈಲ್ವೆ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದಿದ್ದರು. ಇದೀಗ ಕೆಲವೇ ದಿನಗಳಲ್ಲಿ ಆ ಎರಡು ರೈಲ್ವೆ ನಿಲ್ದಾಣದ ನಿಲನಕಾಶೆ ತಯಾರಾಗಿದೆ.
ಅಮೃತ್ ಭಾರತ್ ಯೋಜನೆಯಡಿಯಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರೈಲ್ವೆ ನಿಲ್ದಾಣ ಕಟ್ಟಡ ತಲೆ ಎತ್ತಲಿದೆ.
ಮತ್ತು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣಕ್ಕೆ 24.73 ಕೋಟಿ ರೂಪಾಯಿ ಯೋಜನೆ ಮೂಲಕ ಸುಂದರ ರೈಲ್ವೆ ನಿಲ್ದಾಣ ಕಟ್ಟಡ ತಲೆಎತ್ತಲಿದೆ. ಅದ್ಭುತ ವಿನ್ಯಾಸ ಹೊಂದಿರುವ ಈ ಎರಡೂ ರೈಲ್ವೆ ನಿಲ್ದಾಣದ ಶಿಲಾನ್ಯಾಸ ಕಾರ್ಯಕ್ರಮವೂ ಅತೀ ಶೀಘ್ರದಲ್ಲೇ ನಡೆಯಲಿದ್ದು ಆದಷ್ಟು ಬೇಗ ಲೋಕಾರ್ಪಣೆಗೊಳಿಸುತ್ತೇವೆ ಎಂದು ಸಂಸದ ನಳಿನ್ ತಿಳಿಸಿದ್ದಾರೆ.
0 Comments