ವಿವಿಧ ಸಂಘಗಳ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ವಿವಿಧ ಸಂಘಗಳ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ




ಮೂಡುಬಿದಿರೆ : ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಲಯನ್ಸ್ ಕ್ಲಬ್ ಆಲಂಗಾರು, ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರ ಸಮಾಜ ಮಂದಿರದಲ್ಲಿ ಶನಿವಾರ ನಡೆಯಿತು.

  ಖ್ಯಾತ ಪ್ರಸೂತಿ ತಜ್ಞ ಡಾ.ರಮೇಶ್ ಅವರು ಗರ್ಭಿಣಿ ತಾಯಂದಿರಿಗೆ ಮಾಹಿತಿ ನೀಡಿ ಸಮಾಜಕ್ಕೆ ಹೊರೆಯಾಗದ ರೀತಿಯಲ್ಲಿ ಆರೋಗ್ಯವಂತ ಮಗುವನ್ನು ನೀಡುವಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಹೆಚ್ಚಿನ ಯುವತಿಯರು, ಯುವಕರು ಇತ್ತೀಚಿನ ದಿನಗಳಲ್ಲಿ ಮದುವೆ, ಮಕ್ಕಳು ಬೇಗ ಬೇಡ ಎಂಬ ಯೋಚನೆಯಲ್ಲಿರುತ್ತಾರೆ. ತಡವಾದಂತೆ ವಿಕಲಚೇತನ ಮಕ್ಕಳು  ಹುಟ್ಟುವ  ಸಾಧ್ಯತೆ ಇರುತ್ತದೆ. ಮದುವೆ ಮತ್ತು ಮಕ್ಕಳು ಯಾವಾಗ ಆಗಬೇಕೆಂಬುದರ ಬಗ್ಗೆ ಅರಿವಿರಬೇಕು. ಆಧುನಿಕ, ವೈಜ್ಞಾನಿಕ ವಿಧಾನಗಳು ಅಬಿವೃದ್ಧಿಯನ್ನು ಹೊಂದುತ್ತಿದ್ದು  ಇವುಗಳ ಪ್ರಯೋಜನವನ್ನು ತಾವು ಪಡೆದುಕೊಳ್ಳಬೇಕು ಎಂದ ಅವರು ಗರ್ಭಿಣಿ ಸ್ತ್ರೀಯರು ತಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕೆಂದರು.


ಡಾ.ಮುರಳೀಕೃಷ್ಣ ಅವರು ಮಗುವಿನ ಬೆಳವಣಿಗೆ  ವಯಸ್ಸಿಗೆ ಅನುಗುಣವಾಗಿ ಆಹಾರಕ್ರಮದ ಬಗ್ಗೆ  ಮಾಹಿತಿ ನೀಡಿ ಬಲವಂತದಿಂದ ಮಕ್ಕಳಿಗೆ ಆಹಾರ ತಿನ್ನಿಸುವ ಬದಲು ಅವರಿಗೆ ಹಸಿವೆ ಎಂದರೆ ಏನು ಎಂಬುದರ ಬಗ್ಗೆ ತೋರಿಸಿಕೊಡಿ. ಮನೆಯಲ್ಲಿ ನಾವು ತಿನ್ನುವ ಆಹಾರವನ್ನೇ ಮಕ್ಕಳಿಗೂ ನೀಡಿ ಹೊರತು ಹಸಿವನ್ನು ತಣಿಸಲು ಜಂಕ್ ಫುಡ್ ಗಳನ್ನು ನೀಡಬೇಡಿ. ದೀರ್ಘಕಾಲದವರೆಗೆ ಕೆಡದೆ ಇರುವ ಆಹಾರ ಪದಾರ್ಥಗಳನ್ನು  ಮಕ್ಕಳಿಗೆ ನೀಡಬೇಡಿ ಎಂದ ಅವರು ಮಕ್ಕಳಿಗೆ ಹೊಟ್ಟೆ ತುಂಬಿಸಲು ಮೊಬೈಲ್ ಮತ್ತು ಟಿವಿಯ ಮೊರೆ ಹೋಗದಿರಿ ಎಂದು ಸಲಹೆ ನೀಡಿದರು.

 ಮಕ್ಕಳಿಗೆ ಸ್ತ್ರೀ ಹಾಗೂ ಪುರುಷರ  ಬಂಜೆತನದ ಬಗ್ಗೆ ಡಾ.ಶವೀಝ್ ಫೈಝಿ ಅವರು ಆರೋಗ್ಯ ತಪಾಸಣೆ ನಡೆಸಿ ಮಾಹಿತಿ ನೀಡಿದರು.

  ರೋಟರಿ ಕ್ಲಬ್ ಟೆಂಪಲ್ ಟೌನ್ ನ ಅಧ್ಯಕ್ಷ ರೋನಿ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.

 ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸರಿತಾ ಆಶೀರ್ವಾದ್ ಸ್ವಾಗತಿಸಿದರು. ಶಂಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಆಲಂಗಾರು ಲಯನ್ಸ್ ಕ್ಲಬ್‌ ಅಧ್ಯಕ್ಷ ಲೋಯ್ಡ್ ರೇಗೋ ವಂದಿಸಿದರು.

  ಜೈನ್ ಮೆಡಿಕಲ್ ಸೆಂಟರ್ ನ ನುರಿತ ತಜ್ಞರಿಂದ ಸಮಾಲೋಚನೆ ಮತ್ತು ಕೌನ್ಸಿಲಿಂಗ್ ನಡೆಯಿತು.

56 ಮಂದಿಯ ಬಂಜೆತನ ತಪಾಸಣೆ ನಡೆಸಲಾಯಿತು. 35 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಯಿತು.

Post a Comment

0 Comments