ನೆಲ್ಲಿಕಾರು ಪಂಚಾಯತ್ ನಲ್ಲಿ ಗ್ರಂಥಪಾಲಕರ ದಿನ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ನೆಲ್ಲಿಕಾರು ಪಂಚಾಯತ್ ನಲ್ಲಿ ಗ್ರಂಥಪಾಲಕರ ದಿನ ಆಚರಣೆ



ಮೂಡುಬಿದಿರೆ:  ಗ್ರಂಥಾಲಯ ಪಿತಾಮಹ ಡಾ. ಎಸ್ .ಆರ್ ರಂಗನಾಥನ್ ಅವರ ಜನ್ಮ ದಿನವನ್ನು  ಗ್ರಂಥಪಾಲಕರ ದಿನಾಚರಣೆಯಾಗಿ ನೆಲ್ಲಿಕಾರು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ದಲ್ಲಿ ಶನಿವಾರ  ಆಚರಿಸಲಾಯಿತು.



ಈ ಕಾರ್ಯಕ್ರಮವನ್ನು ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷೆ  ಸುಶೀಲ ಉದ್ಘಾಟಿಸಿದರು.

ಸದಸ್ಯರಾದ ಜಯಂತ ಹೆಗ್ಡೆ ,  ಉದಯ ಪೂಜಾರಿ, ಪ್ರತಿಮಾ,  ಸುನಂದ ಹಾಗೂ ತೀರ್ಪುಗಾರರಾಗಿ ಆಗಮಿಸಿದ ಮಾನಸ ಪ್ರವೀಣ್ ಭಟ್ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆಂಚಾರು ಶಾಲೆಯ ಸಹ ಶಿಕ್ಷಕಿಯಾದ ಅರ್ಚನ ಮತ್ತು‌ಮಾನಸ ಪ್ರವೀಣ್ ಭಟ್  ಗ್ರಂಥಪಾಲಕರ ದಿನದ ಮಹತ್ವದ ಬಗ್ಗೆ ತಿಳಿಸಿದರು.

 ಗ್ರಂಥಾಲಯ ಮೇಲ್ವಿಚಾರಕಿ  ಪ್ರಮೀಳಾ ಉಪಸ್ಥಿತರಿದ್ದರು.

 ಗ್ರಂಥಾಲಯ ದಿನಾಚರಣೆ ಅಂಗವಾಗಿ  ಗ್ರಂಥಾಲಯ ದಲ್ಲಿ ನೋಂದಾಯಿತ ಮಕ್ಕಳಿಗೆ *ಗ್ರಂಥಾಲಯದ ಮಹತ್ವದ* ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ *ನಿಮ್ಮ ಕಲ್ಪನೆಯ ಗ್ರಂಥಾಲಯ ಚಿತ್ರ* ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಯಿತು ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್  ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಣೆಗೈದರು. ಪಂಚಾಯತ್ ಸಿಬ್ಬಂದಿ ಗಳಾದ  ರೇಣುಕಾ ,   ಲಕ್ಷ್ಮಣ, ಕು.ಪ್ರಜ್ಞಾ ಇವರು ಸಹಕರಿಸಿದರು.

Post a Comment

0 Comments