ಮೆಕ್ಕಾ- ಮದೀನಕ್ಕೆ ತೆರಳಿದ್ದ ವ್ಯಕ್ತಿಗೆ ಹೃದಯಾಘಾತ
ಮೂಡುಬಿದಿರೆ: ಮೆಕ್ಕಾ ಮದೀನಕ್ಕೆ ಯಾತ್ರೆಗೆ ತೆರಳಿದ್ದ ಇಲ್ಲಿನ ಕೊಡಂಗಲ್ಲು ನಿವಾಸಿ ಶನಿವಾರ ಹ್ರದಯಾಘಾತಕ್ಕೊಳಗಾಗಿ ಸಾವನಪ್ಪಿದ ಘಟನೆ ನಡೆದಿದೆ.
ಮೃತ ವ್ಯಕ್ತಿ ಕೊಡಂಗಲ್ಲು ನಿವಾಸಿ ಹಾಮ್ಮದ್(73)ಎಂದು ತಿಳಿದು ಬಂದಿದೆ. ಇವರು ಎರಡು ವಾರಗಳ ಹಿಂದೆ ತನ್ನ ಕುಟುಂಬಿಕರ ಜತೆ ಮೆಕ್ಕಾ ಮತ್ತು ಮದೀನ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದರು. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶನಿವಾರ ಮಧ್ಯಾಹ್ನ ವಿಮಾನ ಮೂಲಕ ಮದೀನ ಸಮೀಪದ ಜಿದ್ದಾ ಏರ್ ಪೋರ್ಟ್ ಗೆ ಹೊರಡಲು ಸಿದ್ಧತೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರು ಅಲ್ಲಿ ಅವರು ಮ್ರತಪಟ್ಟರೆನ್ನಲಾಗಿದೆ.
ಹಾಮದ್ ಅವರು ಕಳೆದ 15 ವರ್ಷ ವಿದೇಶದಲ್ಲಿದ್ದು ನಂತರ ಊರಿನಲ್ಲಿ ನೆಲೆಸಿದ್ದರು. ಮೂಡುಬಿದಿರೆಯಲ್ಲಿ ಸುಮಾರು 25 ವರ್ಷಕ್ಕು ಮಿಕ್ಕಿ 'ಮದನಿ' ಹೆಸರಿನ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಅವರಿಗೆ ಪತ್ನಿ ಇಬ್ಬರು ಗಂಡು ನಾಲ್ವರು ಹೆಣ್ಣು ಮಕ್ಕಳು ಇದ್ದಾರೆ.
0 Comments