ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಸು ಬಲಿ

ಜಾಹೀರಾತು/Advertisment
ಜಾಹೀರಾತು/Advertisment

 ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಸು ಬಲಿ




ಮೂಡುಬಿದಿರೆ: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೆಳುವಾಯಿಯ ಮಿತ್ತ ಅಣೆಬೆಟ್ಟುವಿನಲ್ಲಿ ಗಬ್ಬದ ಹಸುವೊಂದು ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

  ಸಾವನ್ನಪ್ಪಿದ ಹಸುವನ್ನು ಮಿತ್ತ ಆಣೆಬೆಟ್ಟು ಶಿವಾನುಗ್ರಹ ಮನೆಯ ಗಂಗಾಧರ ಪೂಜಾರಿಯವರ ಮನೆಯದೆಂದು ಗುರುತಿಸಲಾಗಿದೆ.


ಹಸುವನ್ನು ತೋಟವನ್ನು ಕಟ್ಟಲಾಗಿದ್ದು ಅಲ್ಲಿ  ಹೆಚ್‌ ಟಿ ಲೈನ್‌ ತುಂಡಾಗಿ ಹಸುವಿನ ಮೇಲೆ ಬಿದ್ದ ಪರಿಣಾಮವಾಗಿ ಹಸು ಸಾವನ್ನಪ್ಪಿದೆ. ಲೈನ್‌ ಬಿದ್ದಷ್ಟು ಜಾಗ ಸಂಪೂರ್ಣ ಭಸ್ಮವಾಗಿದೆ. ಸರಿಯಾಗಿ ನಾಲ್ಕು ವರುಷದ ಹಿಂದೆ ಇದೇ ಮನೆಯ ಕೀರ್ತಿ ಪೂಜಾರಿ (೨೭) ಹೆಚ್‌ ಟಿ ಲೈನ್‌ ಅವಘಡದಿಂದಾಗಿ ದಾರುಣ ಸಾವನ್ನಪ್ಪಿದ್ದರು. ಜನಸಂಚಾರವಿರುವ ಪರಿಸರದಲ್ಲಿ ವಿದ್ಯುತ್‌ ಲೈನ್‌ ಹಾದುಹೋಗುವುದು ಬೇಡ ಎಂಬ ಒತ್ತಡ ಪರಿಸರವಾಸಿಗಳದ್ದಾಗಿದ್ದರೂ, ಅಧಿಕಾರಿಗಳು ಜನಪ್ರತಿನಿಧಿಗಳು ಮೌನ ವಹಿಸಿದ್ದು ಘಟನೆ ಮರುಕಳಿಸುವಂತೆ ಮಾಡಿದೆ. ಯಾವ ಕಾರಣಕ್ಕೂ ಮತ್ತೆ ಲೈನ್‌ ಅಳವಡಿಸಲು ಬಿಡೆವು ಎಂದು ಮುಂಜಾನೆಯಿಂದಲೇ ಪರಿಸರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಅಳವಡಿಸಿದ್ದ ವಿದ್ಯುತ್‌ ಲೈನ್‌ ಸ್ಥಳಾಂತರಿಸುವಂತೆ ಅನೇಕಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಶೂನ್ಯ ಎಂಬುದು ಸ್ಥಳೀಯರ ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.


.

Post a Comment

0 Comments