.
ಆಳ್ವಾಸ್‌ನಲ್ಲಿ ೪೬ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ
ಮೂಡುಬಿದಿರೆ: ನಾವಿಂದು ವೈಜ್ಞಾನಿಕ ಯುಗದಲ್ಲಿದ್ದೇವೆ. ನಮ್ಮ ದೇಶವು ಯುವ ಸಮೂಹ ಮತ್ತು ಯುವ ವಿಜ್ಞಾನಿಗಳಿಂದ ತುಂಬಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ ಆ ಪ್ರತಿಭೆಯನ್ನು ಅನಾವರಣಗೊಳಿಸಲು ಈ ವೇದಿಕೆ ಪೂರಕವಾಗಿದೆ. ಸರಜಾರಗಳು ಕೂಡಾ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಇದನ್ನು ಯುವ ವಿಜ್ಞಾನಿಗಳು ಸದುಪಯೋಗಪಡಿಸಿಕೊಂಡು ದೇಶವನ್ನು ಅಭಿವೃದ್ಧಿಯ ಪಥದತ್ತ ಸಾಗಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಅವರು ಮಿಜಾರಿನಲ್ಲಿರುವ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಎರಡು ದಿನಗಳು (ಆ.೧೧ ಮತ್ತು ೧೨) ನಡೆಯಲಿರುವ ‘೪೬ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸ್ಥಳೀಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಕೆಎಸ್‌ಸಿಎಸ್‌ಟಿ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳ ಜ್ಞಾನ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಗುರುತಿಸುವ ಕ್ರಮವು ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಮೌಲ್ಯಯುತವಾಗಿದೆ ಎಂದು ವಿಶ್ಲೇಷಿಸಿದರು.
ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳನ್ನು ಮೌಲ್ಯಮಾಪನ ಮಾಡಿ, ಉತ್ತಮ ಪ್ರಾಜೆಕ್ಟ್ ಗಳಿಗೆ ಸಹಾಯಧನ ನೀಡಿ, ಉತ್ಕೃಷ್ಟ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿ- ಪರಿಚಯಿಸಿ, ಅಂತಿಮ ೭೫ಕ್ಕೆ ಬಹುಮಾನ ನೀಡಿ, ಅವುಗಳಲ್ಲಿ ಒಂದು ಉತ್ತಮ ಮಹಾವಿದ್ಯಾಲಯವನ್ನು ಪುರಸ್ಕರಿಸುವ ಕಾರ್ಯ ಅನುಕರಣೀಯ. ಇದು ತಾಂತ್ರಿಕ ಶಿಕ್ಷಣದಲ್ಲಿ ಪರಿಣಾಮಕಾರಿ ಎಂದರು.
ಕೆಎಸ್‌ಸಿಎಸ್‌ಟಿಯು ಕಳೆದ ೪೫ ವರ್ಷಗಳಲ್ಲಿ ೧೫,೩೦೦ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಿ, ಸಹಾಯಧನ ನೀಡಿದೆ. ಈ ಸಾಲಿನಲ್ಲಿ ೧೯೭ ಎಂಜಿನಿಯರಿಂಗ್ ಕಾಲೇಜುಗಳಿಂದ ೫,೯೬೧ ಯೋಜನಾ ಪ್ರಸ್ತಾವ ಸ್ವೀಕರಿಸಿದ್ದು, ೧,೪೯೪ ಯೋಜನೆಗಳಿಗೆ ತಾಂತ್ರಿಕ ಹಾಗೂ ಧನ ಸಹಾಯ ನೀಡಿದೆ. ೪೩೩ ಅತ್ಯುತ್ತಮ ಯೋಜನೆಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದರು.
ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ. ಅಶೋಕ ಎಂ. ರಾಯಚೂರ್ ಮಾತನಾಡಿ, ಕಾರ್ಯಕ್ರಮವು ೧೯೭೭ರಲ್ಲಿ ಆರಂಭವಾಗಿದ್ದು, ಈವರೆಗೆ ನಮಗೆ ೬೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಪ್ರಾಜೆಕ್ಟ್ ಗಳು ಬಂದಿವೆ. ವಿಶ್ವ ಹಾಗೂ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಬೆಂಬಲ ನೀಡುತ್ತಾ ಬಂದಿದ್ದೇವೆ ಎಂದರು.
ಎಸ್‌ಪಿಪಿ ವರದಿ ಹಾಗೂ ಸಿಡಿಯನ್ನು ಬಿಡುಗಡೆ ಮಾಡಲಾಯಿತು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಡಾ. ಸುಧೀರ್ ಶೆಟ್ಟಿ ಹಾಗೂಕೆಎಸ್‌ಸಿಎಸ್‌ಟಿಯ ಕೆ.ಎನ್. ವೆಂಕಟೇಶ್ ವೇದಿಕೆಯಲ್ಲಿದ್ದರು.
ಕೆಎಸ್‌ಸಿಎಸ್‌ಟಿ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಯು.ಟಿ. ವಿಜಯ್ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನ:
ತಾಂತ್ರಿಕ ಪ್ರದರ್ಶನಗಳನ್ನು ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಹ್ಯೂಬರ್ಟ್ ಮನೋಹರ್ ವಾಟ್ಸನ್ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ವಿವಿಧ ತಾಂತ್ರಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳು ಇದ್ದರು.
೧೩೩ ಕಾಲೇಜುಗಳ ೭೧೨ ವಿದ್ಯಾರ್ಥಿಗಳು ಒಟ್ಟು ೩೬೮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ೧೬೦ ಪ್ರಾಧ್ಯಾಪಕರು ಪಾಲ್ಗೊಂಡರು.
ಆಳ್ವಾಸ್ ಸಾಂಸ್ಕೃತಿಕ ತಂಡದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಮುದ ನೀಡಿತು.
ಬಾಕ್ಸ್-೧
‘ಚಂದ್ರಯಾನದಲ್ಲಿ ಆಳ್ವಾಸ್ ಹೆಮ್ಮೆ’
ಚಂದ್ರಯಾನ ಯಶಸ್ವಿಗೊಂಡ ಮೂರನೇ ದೇಶ ಭಾರತ. ಇಸ್ರೋದ ಈ ಯೋಜನೆಯಲ್ಲಿ ಆಳ್ವಾಸ್‌ನ ಹಿರಿಯ ವಿದ್ಯಾರ್ಥಿನಿ ನಂದಿನಿ ಕಾರ್ಯನಿರ್ವಹಿಸಿದ್ದು, ನಮಗೆಲ್ಲ ಹೆಮ್ಮೆ ಎಂದ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಮೋಹ ಬೇಡ. ದೇಶದಲ್ಲಿ ಸಾಕಷ್ಟು ಅವಕಾಶ ಇವೆ ಎಂದರು.
0 Comments