*ದೇಶ ಭಕ್ತಿಯು ದೇಶಪ್ರೇಮಕ್ಕೆ ನಾಂದಿಯಾಗಲಿ:ಧನಕೀರ್ತಿ ಬಲಿಪ*
ಸ್ವಾತಂತ್ರ್ಯ ಎಂದರೆ ಮನಬಂದಂತೆ ವರ್ತಿಸುವುದು ಎಂದಲ್ಲ. ಜನ ಮೆಚ್ಚುವ ರೀತಿಯಲ್ಲಿ ಜನರಿಗೆ ಒಳಿತಾಗುವ ರೀತಿಯಲ್ಲಿ ಸಮಾಜಮುಖಿಯಾಗಿ ಬದುಕುವುದೇ ಪ್ರಜ್ಞಾವಂತ ನಾಗರಿಕನ ಕರ್ತವ್ಯವಾಗಿದೆ. ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರದ ಜೀವನವಲ್ಲ. ವಿದ್ಯಾರ್ಥಿಗಳು ಮತ್ತು ಯುವ ಜನಾಂಗ ದೇಶಭಕ್ತಿಯ ಜೊತೆಯಲ್ಲಿ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ದೇಶಭಕ್ತಿಯು ದೇಶಪ್ರೇಮಕ್ಕೆ ನಾಂದಿಯಾಗಲಿ ಎಂದು ಹಂಡೇಲುಗುತ್ತು ಧನಕೀರ್ತಿ ಬಲಿಪ ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಅವರು ಹಂಡೇಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜ ಆರೋಹಣಗೈದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಮಾತುಗಳನ್ನಾಡಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರತಿ ವರ್ಷದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕುಮಾರಿ ಕಾವ್ಯ ಅವಳ ಸ್ಮರಣಾರ್ಥ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ವಿದ್ಯಾರ್ಥಿಗಳಿಗೆ ಜಾಮೆಂಟ್ರಿ ಬಾಕ್ಸ್ ಮತ್ತು ವಾಟರ್ ಬಾಟಲ್ ಗಳನ್ನು ವಿತರಿಸಿದರು. ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ತಾಹಿರಾಬಾನು ,
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮುರಳಿಧರ, ಶ್ರೀ ಫಿರೋಜ್ ಖಾನ್, ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀಮತಿ ವೀರ, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಅಬ್ದುಲ್ ಅಮೀರ್, ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ
ಶ್ರೀ ಜಯಂತ್ ಕೆ. ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಕಾಂತಿ ಸ್ವಾಗತಿಸಿದರು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಡಾ.ದೊರೆಸ್ವಾಮಿ ಕೆ . ಎನ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಶಿಕ್ಷಕರಾದ ಶ್ರೀಮತಿ ಚಿತ್ರಾವತಿ, ಶ್ರೀಮತಿ ಸುಜಾತ ಭಟ್, ಶ್ರೀಮತಿ ಚಂದ್ರಿಕಾ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
0 Comments