ಗೋ ಪೂಜೆ, ಭೂಮಿ ಸುಪೋಷಣೆ, ಭಾರತಮಾತೆ ಪೂಜೆಯೊಂದಿಗೆ ಸ್ವ-ಸಹಾಯ ಸಂಘದ ದಶ ವರ್ಷದ ವಾರ್ಷಿಕೋತ್ಸವ
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿರುವ ಶ್ರೀ ದುರ್ಗಾ ವಂದೇ ಮಾತರಂ ಸ್ವ-ಸಹಾಯ ಸಂಘದ 10 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ವಿಶ್ವನಾಥ ಅವರ ಮನೆಯಲ್ಲಿ ಭಾನುವಾರ ನಡೆಯಿತು.
ಊರಿನ ಹಿರಿಯರಾದ ಸೂರಣ್ಣ ಅವರು ಭಾರತಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಯಮಿ ಅಶೋಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ದೇಶೀ ಗೋ ಜಾಗೃತಿ, ದೇಶೀ ಗೋವಿನ ಮಹತ್ವದ ಬಗ್ಗೆ ಮಾತನಾಡಿ ದೇಶೀ ಗೋವುಗಳ ನಾಶವಾದರೆ ದೇಶವೂ ನಾಶವಾದಂತೆ. ದೇಶೀ ಗೋವಿನ ಸಗಣಿ ಮತ್ತು ಮೂತ್ರದಲ್ಲಿ ಔಷಧೀಯ ಗುಣಗಳಿವೆ ಅವುಗಳ ಉತ್ಪನ್ನಗಳನ್ನು ಬಳಸುವುದರಿಂದ ನಮ್ಮ ಆರೋಗ್ಯ ಮತ್ತು ವಾತಾವರಣವೂ ಶುದ್ಧವಾಗಿರುತ್ತದೆ ಎಂದು ಸಲಹೆ ನೀಡಿದರು.
ವಂದೇ ಮಾತರಂ ಬ್ಯಾಂಕಿನ ನಿರ್ದೇಶಕ, ಕಟೀಲು ಪ.ಪೂ.ಕಾಲೇಜಿನ ಉಪನ್ಯಾಸಕ ಡಾ.ಕೇಶವ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಕ್ಕಳಲ್ಲಿ ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಸಂಘಗಳನ್ನು ಕೇವಲ ಸಾಲಗಳನ್ನು ಪಡೆಯಲು ಮಾತ್ರ ಇರುವುದಲ್ಲ ಸಂಸ್ಕಾರವನ್ನೂ ಪಡೆಯಲು ಸಾಧ್ಯವಿದೆ. ನಮ್ಮ ಮಕ್ಕಳಿಗೂ ಉತ್ತಮ ಸಂಸ್ಕಾರವನ್ನು ನೀಡಿ ಎಂದು ಸಲಹೆ ನೀಡಿದರು.
ತಂಡದ ಮೇಲ್ವೀಚಾರಕ ವಿಶಾಲ್ ಉಪಸ್ಥಿತರಿದ್ದರು.
ತಂಡಕ್ಕೆ ಅಶೋಕ್ ಅವರು ನೀಡಿರುವ ಸೇವೆಯನ್ನು ಗುರುತಿಸಿ ವಿಶ್ವನಾಥ ಸಹಿತ ತಂಡದ ಸದಸ್ಯರು 'ಕಲ್ಪ ವೃಕ್ಷ' ವನ್ನು ನೀಡಿ ಗೌರವಿಸಿದರು.
ತಂಡದ ಸದಸ್ಯರಾದ ಭವಿತಾ ಸ್ವಾಗತಿಸಿದರು. ಸುಜಾತ ವರದಿ ವಾಚಿಸಿದರು.ಚಂದ್ರಾವತಿ ಅನಿಸಿಕೆಯನ್ನು ಹಂಚಿಕೊಂಡರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಬಂಧಕಿ ಮಮತಾ ವಂದಿಸಿದರು.
ಇದಕ್ಕೂ ಮೊದಲು ತಂಡದ ಸದಸ್ಯರಿಂದ ಗೋ ಪೂಜೆ, ಭೂಮಿ ಸುಪೋಷಣೆ ವಿಶೇಷವಾಗಿ ನಡೆಯಿತು.
0 Comments