ಬಿಆರ್ ಪಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪದ್ಮಜಾಗೆ ಬೀಳ್ಕೊಡುಗೆ
ಮೂಡುಬಿದಿರೆ: ಕಳೆದ ಮೂವತ್ತು ವರ್ಷಗಳಿಂದ ಬಾಬುರಾಜೇಂದ್ರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಮುಖ್ಯ ಶಿಕ್ಷಕಿ ಪದ್ಮಜಾ ಮತ್ತು ಆದರ್ಶ ಪ್ರೌಢಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ತದ ನಂತರ ಬಿಆರ್ ಪಿ ಶಾಲೆಯಲ್ಲಿ 18 ದಿನಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಎಗ್ಬಟ್ ೯ ಅವರಿಗೆ ಶಾಲಾ ಆಡಳಿತ ಮಂಡಳಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ " ಶಿಕ್ಷಕಿ ಮತ್ತು ಮುಖ್ಯ ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸಿದ ಪದ್ಮಜಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅನುಕರಣೀಯ ಎಂದು ಶ್ಲಾಘಿಸಿದರು" .
ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೆ, ಅಭಯಚಂದ್ರ ಜೈನ್ ಮಾತನಾಡಿ ಪದ್ಮಜಾ ಶಾಲೆಗೆ ನೀಡಿದ ಕೊಡುಗೆಯನ್ನು, ಕರ್ತವ್ಯ ಪ್ರಜ್ಞೆಯನ್ನು ಸ್ಮರಿಸಿದರು. ಸನ್ಮಾನಿತರಾದ ಪದ್ಮಜಾ, ಎಗ್ಬರ್ಟ್ ಮೆನೆಜಸ್ ತಮ್ಮ ಕರ್ತವ್ಯದ ಅನುಭವಗಳನ್ನು ಮತ್ತು ಸಹಕಾರವನ್ನು ಸ್ಮರಿಸಿಕೊಂಡರು.
ಪುರಸಭಾ ಸದಸ್ಯೆ ಸ್ವಾತಿ ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ಅಜಿತ್ ಮುರಯರ್,ಬಾಹುಬಲಿ, ಪುಷ್ಪರಾಜ್, ಯತಿರಾಜ್, ಶ್ರೀ ರಾಮಪ್ರಸಾದ್ ಭಟ್,ಟ್ರಸ್ಟ್ ನ ಸದಸ್ಯರಾದ ರಾಜೇಶ್ ಬಂಗೇರ ,ಮನೋಜ್ ಶೆಣೈ ದಿನೇಶ್ ಚೌಟ,ಸಹ ಶಿಕ್ಷಕ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶ್ರೀ, ಶಿಕ್ಷಣ ಇಲಾಖೆಯ ಬಿ.ಈ.ಓ. ಗಣೇಶ್, ಈ.ಸಿ.ಓ. ಸ್ಮಿತಾ ಸಿ.ರ್.ಪಿ. ಮಹೇಶ್ವರಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಮನಾಥ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಆಕರ್ಷ್ ಪ್ರಾರ್ಥಿಸಿದನು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಅಣ್ಣು ವಂದಿಸಿದರು.
0 Comments