ಮೂಡುಬಿದಿರೆ ರೋಟರಿಯ ನಾಗರಾಜ್ ಬಳಗದ ಪದಗ್ರಹಣ
ಗುರುವಂದನೆ, ಆರ್ಥಿಕ, ವೈದ್ಯಕೀಯ ನೆರವು
ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ನಾಗರಾಜ್ ಅವರುಬತನ್ನ ಬಳಗದೊಂದಿಗೆ ಅಧಿಕಾರ ಸ್ವೀಕರಿಸಿ ರೋಟರಿ ದಾನಿಗಳ ಸಹಕಾರದಿಂದ ಅರ್ಥಪೂರ್ಣ ಸೇವಾ ಕಾರ್ಯಗಳನ್ನು ಆರಂಭಿಸಿದರು.
ಗುರುಪೂರ್ಣಿಮೆಯ ಅಂಗವಾಗಿ ತನ್ನ ಪ್ರೌಢಶಾಲೆಯ ಗುರು ವಿಶ್ರಾಂತ ಮುಖ್ಯ ಶಿಕ್ಷಕಿ ಪದ್ಮಜಾ ಕಾಂಬ್ಳಿಯವರನ್ನು ಗೌರವಿಸಿದರು. ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಗೆ ರೂ 50 ಸಾವಿರ ಆರ್ಥಿಕ ನೆರವು, ಅರ್ಹ ವಿದ್ಯಾರ್ಥಿಗಳಿಗೆ ರೂ 30 ಸಾವಿರ ಶಿಕ್ಷಣ ಶುಲ್ಕ, ಫಲಾನುಭವಿಯೋರ್ವರಿಗೆ ಶ್ರವಣ ಸಾಧನ, ಮರಿಯಾಡಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್,ಪುಸ್ತಕ, ಸ್ಟೇಶನರಿ ವಸ್ತುಗಳು, ಸರಕಾರಿ ಆಸ್ಪತ್ರೆಗೆ ಡೆಂಟಲ್ ಸ್ಕೇಲ್ ಯಂತ್ರ ವಿತರಿಸುವ ಮೂಲಕ ಗಮನ ಸೆಳೆದರು.
ರೋಟರಿ ಜಿಲ್ಲೆ 3181ನ ಮಾಜಿ ಗವರ್ನರ್ ಎಂ.ರಂಗನಾಥ್ ಭಟ್ ಅವರು ನಿಶ್ಮಿತಾ ಪ್ಯಾರಡೈಸ್ ಹಾಲಿನಲ್ಲಿ ನಡೆದ ಮೂಡುಬಿದಿರೆ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಸಡಿ ಸಹಾಯದ ಅಗತ್ಯವಿರುವವರು ಅರ್ಹರಿಂದ ನೆರವಿನ ಭರವಸೆಯಲ್ಲಿರುತ್ತಾರೆ. ಸಕಾಲದಲ್ಲಿ ಅವರಿಗೆ ನೆರವಾಗುವ ಸೇವೆ ಇಬ್ಬರಲ್ಲೂ ಮಧುರ ನೆನಪುಗಳನ್ನು ಉಳಿಸುತ್ತದೆ. ಹೀಗೆ ಸಂತಸವನ್ನು ಹಂಚುವುದರಲ್ಲೇ ಬದುಕಿನ ಮಹತ್ವ ಅಡಗಿದೆ ಎಂದು ನುಡಿದರು. ಅರ್ಥಪೂರ್ಣ ಸಮಾಜ ಸೇವಾ ಕೊಡುಗೆಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಅಸಿಸ್ಟೆಂಟ್ ಗವರ್ನರ್ ಡಾ.ರಮೇಶ್ ರೋಟಾದ್ರಿ ಪತ್ರಿಕೆಯ ಅನಾವರಣಗೈದರು. ಡಾ. ಸಮಥ್ ೯ಭಟ್, ಪ್ರಜ್ವಲ್ ಆಚಾರ್ ರೋಟರಿ ಬಳಗಕ್ಕೆ ಸೇರಿಕೊಂಡರು. ವಲಯ ಲೆಫ್ಟಿನೆಂಟ್ ಯಶವಂತ್ ಪಟವರ್ಧನ್, ನಿರ್ಗಮನ ಅಧ್ಯಕ್ಷ ಮಹಮ್ಮದ್ ಆರಿಫ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಅವಿಲ್ ಡಿ.ಸೋಜಾ ವಾರ್ಷಿಕ ವರದಿ ಮಂಡಿಸಿದರು. ಜೆ.ಜೆ.ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ನಾಗರಾಜ್ ಹೆಗ್ಡೆ ವಂದಿಸಿದರು.
0 Comments