ಪುತ್ತಿಗೆಯಲ್ಲಿ ಇಂದಿರಾ ಸೇವಾ ಕೇಂದ್ರ ಆರಂಭ
ಮೂಡುಬಿದಿರೆ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಪಂಚಶಕ್ತಿ ಯೋಜನೆಗಳನ್ನು ಉಚಿತ ಆನ್ ಲೈನ್ ರಿಜಿಸ್ಟ್ರೇಷನ್ ಸೇವೆಯ ಮೂಲಕ ಮನೆಮನೆಗೆ ತಲುಪಿಸುವ ಉದ್ದೇಶದಿಂದ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಬೈಲಿನಲ್ಲಿ ತೆರೆಯಲಾಗಿರುವ ಇಂದಿರಾ ಸೇವಾ ಕೇಂದ್ರವನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಜೈನ್ ಅವರು ರಾಜ್ಯದ ಜನಮೆಚ್ಚಿದ ನಾಯಕ ಸಿದ್ಧರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಲೇ ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಈಗ ಮತ್ತೆ ಮುಖ್ಯಮಂತ್ರಿಯಾದೊಡನೆ ಮನೆಯ ತಾಯಂದಿರಿಗೆ ಉಪಯುಕ್ತವಾಗುವಂತಹ ಐದು ಯೋಜನೆಗಳನ್ನು ಜಾರಿಗೆ ತರಲು ಸಿದ್ದರಾಗಿದ್ದು ಈ ಯೋಜನೆಗಳನ್ನು ಸ್ಥಳೀಯ ಮುಖಂಡ ವಾಸುದೇವ ನಾಯಕ್ ಅವರ ಮುತುವರ್ಜಿಯಿಂದ ಮನೆಮನೆಗೆ ಉಚಿತವಾಗಿ ತಲುಪಿಸುವ ಉದ್ದೇಶದಿಂದ ಈ ಇಂದಿರಾ ಸೇವಾ ಕೇಂದ್ರವನ್ನು ಇಲ್ಲಿ ತೆರೆಯಲಾಗುತ್ತಿದ್ದು ಸಾರ್ವಜನಿಕರು ಈ ಕೇಂದ್ರದ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯ ಪುರುಷೋತ್ತಮ ನಾಯಕ್, ಅನ್ಸಿಲ್ಲಾ ಮೆಟಿಲ್ಡಾ ಕರ್ಡೋಜಾ, ಇರ್ಫಾನ್ ಶೇಕ್ ಗುಡ್ಡೆಯಂಗಡಿ, ಪಾಲಡ್ಕ ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಮಾರ್ಲ, ಸುರೇಶ್ ಕರ್ಮರನ್ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿದರು. ಸೇವಾ ಕೇಂದ್ರದ ರೂವಾರಿ ವಾಸುದೇವ ಪಿ. ನಾಯಕ್ ವಂದಿಸಿದರು.
0 Comments