ಮಾನ ಹಾನಿಕಾರಕ ವೀಡಿಯೋ ವೈರಲ್ : ಯುವಕನ ಬಂಧನ

ಜಾಹೀರಾತು/Advertisment
ಜಾಹೀರಾತು/Advertisment

 ಮಾನ ಹಾನಿಕಾರಕ ವೀಡಿಯೋ ವೈರಲ್ : ಯುವಕನ ಬಂಧನ

ಮೂಡುಬಿದಿರೆ: ವ್ಯಕ್ತಿಯೋರ್ವರ ಮಾನಹಾನಿಕಾರಕ ವೀಡಿಯೋ ವೈರಲ್ ಮಾಡಿರುವ ಆರೋಪದಡಿ ಮಿಜಾರು ಶಾಂತಿಗಿರಿ ನಿವಾಸಿ ಜಯ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಬಗ್ಗಜಾಲು ಸುವರ್ಣನಗರದ ನಿವಾಸಿ ಸುರೇಶ್ ಅವರ ಪುತ್ರ ಸುಮಂತ್ ಅಂಚನ್ ತನ್ನ ಕುಟುಂಬದ ಸದಸ್ಯರೋರ್ವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಕ್ಕೆ ಮನನೊಂದು ಸೋಮವಾರ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

 ವೀಡಿಯೋ ಯಾರ ಮೊಬೈಲ್ ನಿಂದ ಸೋರಿಕೆಯಾಗಿದೆಯೆಂದು ಮೂಡುಬಿದಿರೆ ಪೊಲೀಸರು ತನಿಖೆ ನಡೆಸಿದಾಗ ಜಯ ಮೊಬೈಲ್ ನಿಂದ ಸೋರಿಕೆಯಾಗಿರುವುದು ತಿಳಿದು ಬಂದಿದೆ. ತಕ್ಷಣ ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Post a Comment

0 Comments