ಮೂಡುಬಿದಿರೆ: ಕಸಾಪ ಕಚೇರಿ ಉದ್ಘಾಟನೆ,

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಕಸಾಪ ಕಚೇರಿ ಉದ್ಘಾಟನೆ, 


ಅರುವ ಕೊರಗಪ್ಪ ಶೆಟ್ಟಿ ಅಬಿನಂದನಾ ಗ್ರಂಥ ಲೋಕಾರ್ಪಣೆ

 ಮೂಡುಬಿದಿರೆ: ಅರುವ ಕೊರಗಪ್ಪ ಶೆಟ್ಟಿಯವರು ಚಾರಿತ್ರ್ಯವಂತ ಮೇರು ಕಲಾವಿದ. ಯಕ್ಷಗಾನದ ಶ್ರೀಮಂತ ಪ್ರತಿಭೆ, ತುಳು, ಕನ್ನಡದ ಯಕ್ಷರಂಗದಲ್ಲಿ ರಾಜನಾಗಿ ಮೆರೆದ ಕಲಾವಿದ  ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಹಾಗೂ ದಕ್ಷಿಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಅರುವ ಕೊರಗಪ್ಪಶೆಟ್ಟಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. ಮೂಡುಬಿದಿರೆ ತಾಲೂಕು ಕಸಾಪ


 ಕಛೇರಿಯನ್ನು ಉದ್ಘಾಟಿಸಿದ ಕಸಾಪ ದ.ಕ ಜಿಲ್ಲಾ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ಮಾತನಾಡಿ  ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಒಂದು ಕೋಟಿ ಮಂದಿ ಅಜೀವ ಸದಸ್ಯರನ್ನಾಗಿಸುವ ಗುರಿ ಇದೆ. ಕಳೆದ ಒಂದೂವರೆ ವರ್ಷಗಳಿಂದ ೩೦೦ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿಧ ಕಡೆ ಆಯೋಜಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಮಾಡಿದ್ದೇವೆ. ವಿದ್ಯಾರ್ಥಿಗಳತ್ತ ಕಸಾಪ ಹೋಗಬೇಕು ಎನ್ನುವ ನಿಟ್ಟಿನಲ್ಲಿ ಕೂಡ ಹೆಜ್ಜೆ ಇರಿಸಿದ್ದೇವೆ ಎಂದು ಹೇಳಿದರು. 

 ಅರುವ-ಮಹಾಲಕ್ಷ್ಮಿ ದಂಪತಿಯನ್ನು ಗೌರವಿಸಲಾಯಿತು. 

ಯಕ್ಷಗಾನ ವಿದ್ವಾಂಸ ಡಾ.ಎಂ ಪ್ರಭಾಕರ ಜೋಷಿ ಕೃತಿ ಅನಾವರಣಗೊಳಿಸಿದರು. ಯಕ್ಷಗಾನ ಸಾಹಿತ್ಯವು ಭಾರತೀಯ ಶ್ರೇಷ್ಠ ಸಾಹಿತ್ಯದ ಸಾಲಿಗೆ ಸೇರಿದೆ. ಯಕ್ಷಗಾನ ಸಾಹಿತ್ಯವನ್ನು ಪೂರ್ಣವಾಗಿ ಓದಿದರೆ ಸಮಗ್ರ ಕನ್ನಡ ಅಧ್ಯಯನ ನಡೆಸಿದಂತಾಗುತ್ತದೆ. ಅರುವ ಕೊರಗಪ್ಪ ಶೆಟ್ಟಿಯವರು ಕಲಾವಿದರಿಗೆ ಆದರ್ಶಪ್ರಾಯರಾಗಿದ್ದಾರೆ. ಎಲ್ಲ ರೀತಿ ಪಾತ್ರಗಳಿಗೆ ಸೈ ಎನಿಸಿದ ಕಲಾವಿದ. ಆದರೆ ರಾಜ್ಯ, ರಾಷ್ಟ್ರಮಟ್ಟದ ದೊಡ್ಡ ಗೌರವ ಇನ್ನೂ ಅವರಿಗೆ ಸಿಕ್ಕಿಲ್ಲ. ಆಳ್ವಾಸ್ ಪ್ರಕಾಶನದ ಮೂಲಕ ಕಲಾವಿದ ಅಭಿನಂದ ಗ್ರಂಥ ಸರಣಿಯನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು. 

ಕಸಾಪ ಮೂಡುಬಿದಿರೆ ತಾಲೂಕು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments