ಭಾವಪೂರ್ಣ ವಾತಾವರಣದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗುರುಪೂರ್ಣಿಮಾ ಮಹೋತ್ಸವ ಶುಭಾರಂಭ !

ಜಾಹೀರಾತು/Advertisment
ಜಾಹೀರಾತು/Advertisment



ಭಾವಪೂರ್ಣ ವಾತಾವರಣದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಗುರುಪೂರ್ಣಿಮಾ ಮಹೋತ್ಸವ ಶುಭಾರಂಭ !

g


*ಉಡುಪಿ* : ಆಷಾಢ ಹುಣ್ಣಿಮೆ  ಅಂದರೆ ಗುರುಪೂರ್ಣಿಮೆ ನಿಮಿತ್ತ ೩ ಜುಲೈ ಸೋಮವಾರದಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಡುಪಿ, ಕುಂದಾಪುರ ಹಾಗೂ ಕಾರ್ಕಳದಲ್ಲಿ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆಯನ್ನು ಮಾಡಲಾಗಿತ್ತು. ಈ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡರವರು, ಗಣ್ಯರು ಹಾಗೂ ಸಾಧಕರು ಉಪಸ್ಥಿತರಿದ್ದರು.


 ಈ ಮಹೋತ್ಸವವು ಶ್ರೀ ವ್ಯಾಸಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯೊಂದಿಗೆ ಆರಂಭವಾಯಿತು. ನಂತರ ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶವನ್ನು ವಾಚನ ಮಾಡಲಾಯಿತು. ನಗರದ ಮೂಲೆಮೂಲೆಯಿಂದಲೂ ಈ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರು ಆಗಮಿಸಿದ್ದರು. ಧರ್ಮಶಿಕ್ಷಣ ನೀಡುವ ಮತ್ತು ರಾಷ್ಟ್ರ ಜಾಗೃತಿ ಮೂಡಿಸುವ ಫಲಕಗಳು, ಆಧ್ಯಾತ್ಮ, ಧರ್ಮಾಚರಣೆ ಮತ್ತು ಸಾಧನೆ ಇನ್ನಿತರ ವಿಷಯಗಳ ಕುರಿತ ಗ್ರಂಥ ಪ್ರದರ್ಶಿನಿಗಳು ಈ ಕಾರ್ಯಕ್ರಮಕ್ಕೆ ಮೆರಗು ನೀಡಿದ್ದವು.


ತಮ್ಮ ಸವಿನಯ

*ಶ್ರೀ. ವಿಜಯ ಕುಮಾರ್,*

ಜಿಲ್ಲಾ ಸಮನ್ವಯಕರು,

ಹಿಂದೂ ಜನಜಾಗೃತಿ ಸಮಿತಿ, ಉಡುಪಿ.

(ಸಂಪರ್ಕ : 7204082658)

Post a Comment

0 Comments