ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ :
ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ಇದರ ೧೧ನೇ ವಾರ್ಷಿಕೋತ್ಸವ ಮತ್ತು ಪುಸ್ತಕ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.
ಭಂಡಾರಿ ಮಹಾಮಂಡಲ (ರಿ.) ಬಾರ್ಕೂರು ಇದರ ಅಧ್ಯಕ್ಷ ಸದಾಶಿವ ಭಂಡಾರಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಾತಿ ಸಂಘಟನೆಗಳು ಪರೋಪಕಾರ ಮನೋಭಾವವನ್ನು ಹೊಂದಬೇಕು.
ಸಮಾಜ ಬಾಂಧವರೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಒಳಿತನ್ನು ಸಾಧಿಸಬಹುದು' ಎಂದು ಹೇಳಿದರು.
ಸಂಘದ ಅಧ್ಯಕ್ಷ ಕೆ. ಎನ್. ಪ್ರಕಾಶ್ ಭಂಡಾರಿ ಅವರು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಚಟುವಟಿಕೆಗಳಲ್ಲಿ ಸಮಾಜ ಬಾಂಧವರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವ ಅಭಿವೃದ್ಧಿ ಕಾರ್ಯಗಳಲ್ಲೂ ಆವರು ಕೈಜೋಡಿಸಬೇಕಾಗಿ ವಿನಂತಿಸಿದರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ, ನಿರ್ದೇಶಕ ಪ್ರಕಾಶ್ ತುಮಿನಾಡು ಅವರು ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿತರಿಸಿದರು.
ಸ್ಯಾಕ್ಸೋಫೋನ್ ವಾದಕ ಸಂದೀಪ್ ಭಂಡಾರಿ ಪಲಿಮಾರು ಪಾಲ್ಗೊಂಡಿದ್ದರು.
ಸಂಘದ ಗೌರವಾಧ್ಯಕ್ಷರಾದ ವಾಸುದೇವ ಭಂಡಾರಿ, ವಸಂತಿ ಜೆ. ಭಂಡಾರಿ, ಶಾಂತಾ ಕೆ. ಭಂಡಾರಿ ಮತ್ತು ಸುಮಿತ್ರಾ ಭಂಡಾರಿ ಕಾನ , ಕ್ರೀಡಾ ಕಾರ್ಯದರ್ಶಿ, ಪುರಸಭೆ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್ ಸಹಿತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಿ. ಜಯ ಭಂಡಾರಿ ಸ್ಮರಣಾರ್ಥ ಅವರ ಪತ್ನಿ ವಸಂತಿ ಜೆ. ಭಂಡಾರಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಶಾಲೆಯಿಂದ ತೊಡಗಿ ಸ್ನಾತಕೋತ್ತರ ಪದವಿವರೆಗಿನ ಸಮಾಜದ ೨೦೦ ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ೧೭೦ ಮಂದಿಗೆ ಬಹುಮಾನ ವಿತರಿಸಲಾಯಿತು.
ಸಮ್ಮಾನ: ಎಸ್‌ಎಸ್‌ಎಲ್‌ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಅಮನ್ ಪ್ರಿಯಾಂಶು ಭಂಡಾರಿ, ರಾಷ್ಟ್ರೀಯ ಕ್ರೀಡಾಳು ಅನನ್ಯ ಭಂಡಾರಿ ಮತ್ತು ನಾಟಕಕಾರ ದಿನಕರ ಭಂಡಾರಿ ಕಣಂಜಾರು ಇವರನ್ನು ಸಮ್ಮಾನಿಸಲಾಯಿತು.
ಪ್ರಖ್ಯಾತ್ ಭಂಡಾರಿ ಕೆಸರ್‌ಗದ್ದೆ ಇವರು ಸ್ವಾಗತಿಸಿದರು. ಉಪಾಧ್ಯಕ್ಷ ಯೋಗೇಶ್ ಭಂಡಾರಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ್ ಕೆ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಬಸವನಕಜೆ ಶಾಂತಾ ಕೆ. ಭಂಡಾರಿ ಪ್ರಾಯೋಜಕತ್ವದಲ್ಲಿ ಸಹಭೋಜನ, ಸಮಾಜದ ಬಂಧುಗಳಿಂದ ಸಾಂಸ್ಕೃತಿಕ ಕಲಾಪ, ಭಂಡಾರಿ ಕಲಾವಿದೆರ್ ಬೆದ್ರ ಮತ್ತು ಸಮಾಜದ ಅತಿಥಿ ಕಲಾವಿದರಿಂದ `ಪಿರ ಬನ್ನಗ' (ರಚನೆ, ನಟನೆ, ನಿರ್ದೇಶನ: ದಿನಕರ ಭಂಡಾರಿ ಕಣಂಜಾರು) ತುಳು ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
0 Comments