ಪಣಪಿಲ ಗ್ರಾಮದಲ್ಲಿ ವೃಕ್ಷೋತ್ಸವ:ಒಂದೇ ದಿನದಲ್ಲಿ 150ಕ್ಕೂ ಅಧಿಕ ಗಿಡ ನೆಟ್ಟ ವಿವಿಧ ಸಂಘಟನೆಗಳು

ಜಾಹೀರಾತು/Advertisment
ಜಾಹೀರಾತು/Advertisment

ಪಣಪಿಲ ಗ್ರಾಮದಲ್ಲಿ ವೃಕ್ಷೋತ್ಸವ:ಒಂದೇ ದಿನದಲ್ಲಿ 150ಕ್ಕೂ ಅಧಿಕ ಗಿಡ ನೆಟ್ಟ ವಿವಿಧ ಸಂಘಟನೆಗಳು






ಮೂಡುಬಿದಿರೆ:ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು, ಶ್ರೀ ಇಟಲ ಗೆಳೆಯರ ಬಳಗ ಪಣಪಿಲ ಹಾಗೂ ಹಾಗೂ ಗ್ರಾಮ ಪಂಚಾಯತಿ ದರೆಗುಡ್ಡೆ ಇವುಗಳ ಸಹಭಾಗಿತ್ವದಲ್ಲಿ ಪಣಪಿಲ ಗ್ರಾಮದ ವಿವಿಧೆಡೆ ಸುಮಾರು 150ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪವನ್ನು ಕೈಗೊಳ್ಳಲಾಯಿತು.


ಕುಡುವರಂಗಡಿ ಬಳಿಯ ಭಂಡಾರಕಾಪು ಪರಿಸರ, ಕಲ್ಲೇರಿ ಶ್ರೀ ಕುಕ್ಕಿನಂತ್ತಾಯ ದೈವಸ್ಥಾನ ಪರಿಸರ ಸೇರಿದಂತೆ ವಿವಿಧೆಡೆ ಗಿಡ ನೆಡುವ ಕಾರ್ಯಕ್ರಮ ನಡೆಯಿತು. 


ಇದಕ್ಕೂ ಮುನ್ನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಮತ್ತು ಬಿ ಒಕ್ಕೂಟದ ವತಿಯಿಂದ ಪಣಪಿಲ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಸೋಮವಾರ ನಡೆದ ವೃಕ್ಷೋತ್ಸವದಲ್ಲಿ ದರೆಗುಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತುಳಸಿ ಮೂಲ್ಯ, ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಕೋಟಿ ಚೆನ್ನಯ ಯುವಶಕ್ತಿಯ ಅಧ್ಯಕ್ಷರು ಹಾಗೂ ಇಟಲ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿಯಾದ ಅರುಣ್ ಕುಮಾರ್ ಪಣಪಿಲ, ಕೋಟಿ ಚೆನ್ನಯ ಯುವಶಕ್ತಿಯ ಸ್ಥಾಪಕಾಧ್ಯಕ್ಷರಾದ ವಿಶ್ವನಾಥ ಕೋಟ್ಯಾನ್, ಗೌರವ ಅಧ್ಯಕ್ಷರಾದ ಉದಯ್ ಕೋಟ್ಯಾನ್, ಸಂಚಾಲಕ ಲಕ್ಷ್ಮಣ್ ಸುವರ್ಣ, ಸದಸ್ಯರಾದ ಪ್ರಸನ್ನ ಕೋಟ್ಯಾನ್, ಗ್ರಾಮ ಪಂಚಾಯತಿ ಸದಸ್ಯರಾದ ಸದಸ್ಯರಾದ ಮುನಿರಾಜ್ ಹೆಗ್ಡೆ, ಸಂತೋಷ್ ಪೂಜಾರಿ, ಸುಭಾಷ್ ಚೌಟ, ಶ್ರೀಮತಿ ಜನಿತಾ, ದೀಕ್ಷಿತ್ ಪಣಪಿಲ, ಪ್ರಮುಖರಾದ ಪ್ರವೀಣ್ ಭಟ್ ಕಾನಂಗಿ, ಹರ್ಷೇಂದ್ರ ಪಡಿವಾಳ್, ಸುಧಾಕರ ಡಿ.ಪೂಜಾರಿ,ಅಶ್ವತ್ ಪಣಪಿಲ, ಹರೀಶ್ ಪೂಜಾರಿ ಹಾಗೂ ಗ್ರಾಮಸ್ಥರು ಸೇರಿಕೊಂಡು ಈ ಕಾರ್ಯಕ್ರಮ ಸಂಪನ್ನಗೊಳಿಸಿದರು.

Post a Comment

0 Comments