ಇಟಲ ಕ್ಷೇತ್ರ ಮಹಾತ್ಮೆ ಯಕ್ಷಗಾನಕ್ಕೆ ಮುಹೂರ್ತ
ಪುರಾಣ ಪ್ರಸಿದ್ಧ ಕೊನ್ನಾರ ಮಾಗಣೆ ಹಾಗೂ ಪಣಪಿಲ ಅರಮನೆಗೆ ಸಂಬಂಧಿಸಿದ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಚರಿತ್ರೆಯನ್ನೊಳಗೊಂಡ ಶ್ರೀ ಇಟಲ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದ ಮುಹೂರ್ತ ಕಾರ್ಯಕ್ರಮ ಇಂದು ಇಟಲ ಕ್ಷೇತ್ರದಲ್ಲಿ ನಡೆಯಿತು.
ನಾಟಕ ಹಾಗೂ ಯಕ್ಷಗಾನ ರಚನೆಗಾರ ಗಣೇಶ್ ಬಿ ಅಳಿಯೂರು ರಚನೆಯಲ್ಲಿ ಇಟಲ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ಮೂಡಿ ಬರಲಿದೆ. ಪಣಪಿಲ ಅರಮನೆ ಶ್ರೀ ಬಿ ವಿಮಲ್ ಕುಮಾರ್ ಶೆಟ್ಟಿ ಹಾಗೂ ಅರಮನೆ ಪ್ರಮುಖರ ಜೊತೆ ಪೂಜ್ಯ ತಂತ್ರಿವರ್ಯರು ಶ್ರೀ ನಾಗರಾಜ್ ಭಟ್ ಮುಹೂರ್ತ ನಡೆಸಿಕೊಟ್ಟರು. ಧರ್ಮಸ್ಥಳ ಮೇಳದ ಭಾಗವತರಾದ ಶ್ರೀ ಕರುಣಾಕರ ಶೆಟ್ಟಿಗಾರ್ ಸ್ತುತಿ ಪದ್ಯದೊಂದಿಗೆ ಮಹಾಗಣಪತಿ ಹಾಗೂ ಸೋಮನಾಥೇಶ್ವರ ದೇವರನ್ನು ಸ್ತುತಿಸಿದರು.
ಅಗಸ್ಟ್ ತಿಂಗಳ 18 ತಾರೀಖಿನಂದು ಪ್ರಥಮಭಾಗದ ಪ್ರಥಮ ಪ್ರದರ್ಶನ ಅಳಿಯೂರು ಸುಮಂಗಲಿ ಸಭಾಭವನದಲ್ಲಿ ನಡೆಯಲಿದೆ. ಗರಡಿ ಫ್ರೆಂಡ್ಸ್ ಹಾಗೂ ಇಟಲ ಭಕ್ತಾದಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
0 Comments