ಜವುಳಿ ವ್ಯಾಪಾರಿ , ಹಿರಿಯ ಯೋಗ ಸಾಧಕ ಆರ್ .ಬಿ. ಸುಂದರಂ ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ :   ಜವುಳಿ ವ್ಯಾಪಾರಿ , ಹಿರಿಯ ಯೋಗ ಸಾಧಕ ಆರ್ .ಬಿ. ಸುಂದರಂ (60ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಲ್ಲಿನ ಅರಮನೆ ಬಾಗಿಲು ಪರಿಸರದಲ್ಲಿರುವ ಸ್ವಗೃಹದಲ್ಲಿ ರವಿವಾರ ನಿಧನಹೊಂದಿದರು.ಅವರು ಪತ್ನಿ ,ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.



 ಮೂಲತಃ ತಮಿಳುನಾಡಿನ ಥೇಣಿ ಜಿಲ್ಲೆಯ ವಾಯಲ್ ಪಟ್ಟಿ ನಿವಾಸಿ ಸುಂದರಂ 

ಕೃಷಿಕರಾಗಿದ್ದು , ಚಕ್ಕುಲಿ ಮೊದಲಾದ ತಿಂಡಿ ತಯಾರಿಸಿ ವ್ಯಾಪಾರ  ಮಾಡುತ್ತಿದ್ದರು .


ಕಳೆದ ಮೂರೂವರೆ ದಶಕಗಳಿಂದ  ಮೂಡಬಿದರೆಯಲ್ಲಿ 

ಜವುಳಿ ವ್ಯಾಪಾರಿಯಾಗಿ ಲೈನ್ ಸೇಲ್ ಮೂಲಕ ಸುಂದರಣ್ಣ ಎಂದೇ ಜನಾನುರಾಗಿಯಾಗಿದ್ದರು.


ಯೋಗದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಅವರು 

ಇಲ್ಲಿನ ಮೂಡುಬಿದಿರೆ ತಾಲೂಕು ಪತಂಜಲಿ ಯೋಗ ಸಮಿತಿಯ ಸಕ್ರಿಯ ಯೋಗ ಸಾಧಕರಾಗಿದ್ದರು.

Post a Comment

0 Comments