ಗಾಣಿಗರ ಸಂಘದ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಗಾಣಿಗರ ಸಂಘದ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ

ಮಕ್ಕಳಿಗೆ ಸಂಸ್ಕಾರದ ಜತೆ ಆತ್ಮವಿಶ್ವಾಸವನ್ನು ತುಂಬಿಸಿ : ಶಾಸಕ ಉಮಾನಾಥ ಕೋಟ್ಯಾನ್



ಮೂಡುಬಿದಿರೆ: ಜಾತಿ ಸಂಘಗಳು ಇನ್ನೊಂದು ಜಾತಿ ಸಂಘದ ಜತೆ ಪೈಪೋಟಿ‌ ಮಾಡಲು ಇರುವುದಲ್ಲ. ಇಡೀ ಸಮಾಜವನ್ನು ಮೇಲೆತ್ತಲು ಸಾಧ್ಯವಿಲ್ಲ. ನಮ್ಮ ಸಮಾಜ, ಸಮುದಾಯ ಹಾಗೂ ನಮ್ಮ ಜನರನ್ನು ಒಟ್ಟುಗೂಡಿಸಿ ಅವರಲ್ಲಿ ಯಾರೂ ಆರ್ಥಿಕವಾಗಿ ತೀರ ಹಿಂದುಳಿದಿರುವವರನ್ನು ಮೇಲೆತ್ತಿ ಶಕ್ತಿ ತುಂಬುವಂತಹ ಕೆಲಸಗಳನ್ನು ಜಾತಿ ಸಂಘಗಳು ಮಾಡಬೇಕಾಗಿದೆ ಎಂದು ಕ್ಷೇತ್ರದ ಶಾಸಕ ಉಮಾನಾಥ ಎ.ಕೋಟ್ಯಾನ್‌ ಹೇಳಿದರು.




  ಅವರು ಸಪಳಿಗ ಯಾನೆ ಗಾಣಿಗರ ಸಂಘ(ರಿ.), ಗಾಣಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ಮೂಡುಬಿದಿರೆ ಇವುಗಳ ವತಿಯಿಂದ ಭಾನುವಾರ ಪೊನ್ನೆಚ್ಚಾರಿ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶೇ 100 ಫಲಿತಾಂಶ ದಾಖಲಿಸಿದರೆ ಸಾಲದು ಬದಲಾಗಿ ಜೀವನದಲ್ಲಿ ಸಂಸ್ಕಾರದ ಜತೆಗೆ ಕಷ್ಟಗಳು ಬಂದಾಗ ಹೇಗೆ ಎದುರಿಸುವುದು ಎಂಬುದನ್ನು ಕಲಿಸುವುದರ ಜತೆಗೆ ಆತ್ಮವಿಶ್ವಾಸವನ್ನು ತುಂಬಿಸುವಂತಹ ಕೆಲಸವನ್ನು ಹೆತ್ತವರು ಮಾಡಬೇಕಾಗಿ ಎಂದರು.

  

 ನಾಗರಿಕ ಸಮ್ಮಾನ: ಸಫಲಿಗರ ಯಾನೆ ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಬಂಗೇರಾ ಅಧ್ಯಕ್ಷತೆಯಲ್ಲಿ ಸಮಾಜದ ಹಿರಿಯರಾದ ಜಿ.ಎನ್.ಬಂಗೇರಾ ಮೂಡುಬಿದಿರೆ ಹಾಗೂ ವಾರಿಜ ಸಪಲ್ದಿ ಅಂಕಸಾಲೆ ಅವರನ್ನು ಸಮ್ಮಾನಿಸಲಾಯಿತು.


 ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಅನನ್ಯ ಪಿ.ಕಟೀಲು(ಪ್ರ), ಸಿಂಚನ ಎಸ್.(ದ್ವಿ) ಅವರಿಗೆ ಸಾಧು ಬಿ.ಪುತ್ರನ್ ಸ್ಮರಣಾರ್ಥ, ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಸ್ವಾತಿ (ಪ್ರ), ರಾಜ್ ಬಂಗೇರಾ (ದ್ವಿ) ಹಾಗೂ ಗೌತೇಶ್ (ತೃ) ಅವರಿಗೆ ದಿ.ಜಾರಪ್ಪ ಮೇಸ್ತ್ರಿ ಸ್ಮರಣಾರ್ಥ, 8ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿರುವ ಚೈತ್ರಾ ಅವರಿಗೆ ದಿ.ಸುಂದರಿ ಜಾರಪ್ಪ ಸ್ಮರಣಾರ್ಥ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗ್ರೀಷ್ಮಾ ಅವರಿಗೆ ದಿ. ಬಾಬು ಸಪಳಿಗ ಅವರ ಸ್ಮರಣಾರ್ಥ ವಿದಾರ್ಥಿ ವೇತನವನ್ನು ವಿತರಿಸಲಾಯಿತು.

 ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುವವರಿಗೆ ಬಹುಮಾನವನ್ನು ವಿತರಿಸಲಾಯಿತು.

ಮಂಗಳೂರು ಬೈಕಂಪಾಡಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಕೆ.ಮಹೇಶ್ಚಂದ್ರ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ನ್ಯಾಯವಾದಿ ರಾಘವ ಎಸ್.ಪಡೀಲ್, ಮೂಡುಬಿದಿರೆ ದೇವಾಡಿಗ ಸುಧಾರಕ ಸಂಘದ ಸುರೇಶ್ ದೇವಾಡಿಗ, ಲಯನ್ಸ್ ಕ್ಲಬ್ ನ ಜಿಲ್ಲಾ ಸಂಯೋಜಕ ಲ//ಜಗದೀಶ್ಚಂದ್ರ ಡಿ.ಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೋಮೇಶ್ವರ ಗಾಣಿಗ ಸಂಘದ ಅಧ್ಯಕ್ಷ , ಶ್ರೀ ಕ್ಷೇತ್ರ ಉಳಿಯ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರಾಮದಾಸ್, ಮಹಿಳಾ ವೇದಿಕೆಯ ಅಧ್ಯಕ್ಷೆ ಅಶ್ವಿನಿ ಪ್ರತಾಪ್, ಯುವ ವೇದಿಕೆಯ ಅಧ್ಯಕ್ಷ ನವೀನ್ ಪುತ್ರನ್ ಉಪಸ್ಥಿತರಿದ್ದರು.



  ಸಂಘದ ಅಧ್ಯಕ್ಷ ರಾಜೇಶ್ ಬಂಗೇರಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸಮುದಾಯ ಭವನದ ನಿರ್ಮಾಣಕ್ಕೆ ಸಹಕಾರ ನೀಡುವಂತೆ ವಿನಂತಿಸಿ ಸ್ವಾಗತಿಸಿದರು. ಮಹಿಳಾ ವೇದಿಕೆಯ ಜತೆ ಕಾರ್ಯದರ್ಶಿ ಸಾರಿಕಾ ಬಂಗೇರಾ ವರದಿ ಮಂಡಿಸಿದರು.ಗೌ. ಅಧ್ಯಕ್ಷೆ ಸಂಧ್ಯಾ ಸಂದೀಪ್ ಲೆಕ್ಕಪತ್ರ ಮಂಡಿಸಿದರು. ಸ.ಕಾರ್ಯದರ್ಶಿ ಚೈತ್ರಾ ಸನ್ಮಾನ ಪತ್ರ ವಾಚಿಸಿದರು.ಜತೆ ಕಾರ್ಯದರ್ಶಿ ರೂಪಾ ಪ್ರದೀಪ್ ವಿದ್ಯಾರ್ಥಿ ವೇತನದ ಪಟ್ಟಿಯನ್ನು ಓದಿದರು. ರಾಜ್ ಬಂಗೇರಾ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು.ದಿಯಾ ಬಂಗೇರಾ ಬಹುಮಾನಿತರ ಪಟ್ಟಿಯನ್ನು ನೀಡಿದರು. ಕೇಶವ ಪೊಳಲಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಪ್ರತಾಪ್ ಬೆಟ್ಕೇರಿ ವಂದಿಸಿದರು.


Post a Comment

0 Comments