ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ
ಮೂಡುಬಿದಿರೆ: ಕೆ.ಎಸ್.ಹೆಗ್ಡೆ ದೇರಳಕಟ್ಟೆ ಇದರ ಡೆಂಟಲ್ ವಿಭಾಗ ಮತ್ತು ಆಳ್ವಾಸ್ ನರ್ಸಿಂಗ್ ಕಾಲೇಜಿನ ವತಿಯಿಂದ ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಗುರುವಾರ ನಡೆಯಿತು.
ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್ ನ ಡಾ.ಅಮರಶ್ರೀ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ನಮ್ಮ ಬಾಯಿಯಲ್ಲಿರುವ ಹಲ್ಲುಗಳು ಕೂಡಾ ಮುಖ್ಯ ಕಾರಣವಾಗಿರುತ್ತವೆ. ಸಾಮಾನ್ಯ ಮಕ್ಕಳಿಗಿಂತ ವಿಶೇಷ ಮಕ್ಕಳ ಹಲ್ಲುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಈ ಬಗ್ಗೆ ಹೆತ್ತವರು ಗಮನ ಹರಿಸಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಿದರೆ ಅವರ ಆರೋಗ್ಯವಂತ ಹಲ್ಲಿನ ಜತೆಗೆ ದೈಹಿಕ ಆರೋಗ್ಯದ ಬೆಳವಣಿಗೆಗೂ ಪೂರಕವಾಗುತ್ತದೆ ಎಂದು ಹೇಳಿದರು.
ಆಳ್ವಾಸ್ ನರ್ಸಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಪುನರ್ವ, ಅಸಿಸ್ಟೆಂಟ್ ಪ್ರೊ. ವಿಲ್ಫ್ರೀನಾ ಲೋಬೋ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕೆ.ಎಸ್.ಹೆಗ್ಡೆ ದೇರಳಕಟ್ಟೆ ಡೆಂಟಲ್ ಕಾಲೇಜಿನ ಮತ್ತು ಆಳ್ವಾಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಸಂಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ವಂದಿಸಿದರು.
0 Comments