ಕುರ್ಚಿಯಿಂದ ಎಳೆದು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದು ಯಾರು? ಕಾಂಗ್ರೆಸ್ ಸರ್ಕಾರದ ವಿರುದ್ಧ ಸುದರ್ಶನ ಎಂ ಗರಂ

ಜಾಹೀರಾತು/Advertisment
ಜಾಹೀರಾತು/Advertisment

 ಕುರ್ಚಿಯಿಂದ ಎಳೆದು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದು ಯಾರು? ಕಾಂಗ್ರೆಸ್ ಸರ್ಕಾರದ ವಿರುದ್ಧ ಸುದರ್ಶನ ಎಂ ಗರಂ



ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಸ್ಪೀಕರ್ ಪೀಠಕ್ಕೆ ಎಷ್ಟು ಅವಮಾನ ಮಾಡಿದೆ ಎನ್ನುವುದು ಈಗ ಇತಿಹಾಸ. ಅನೇಕ ಬಾರಿ ಸಂವಿಧಾನ ಬಾಹಿರವಾಗಿ ಕಾಂಗ್ರೆಸ್ ನಡೆದುಕೊಂಡಿದೆ. ಈಗ ಕೇವಲ ಸ್ಪೀಕರ್ ಅವರನ್ನು ಪ್ರಶ್ನಿಸಿದ ಮಾತ್ರಕ್ಕೆ ಅವರನ್ನು ಅಮಾನತು ಮಾಡಿರುವುದು ಹಿಟ್ಲರ್ ಆಡಳಿತ ವೈಖರಿಯ ಕೈಗನ್ನಡಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಯವರು ತಿಳಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷ ಸಭಾಪತಿ ಸ್ಥಾನದಲ್ಲಿದ್ದ ಸಂವಿಧಾನಬದ್ಧ ವ್ಯಕ್ತಿಯನ್ನು ಕುರ್ಚಿಯಿಂದ ಎಳೆದು ಹೊರಹಾಕಿ ಅವಮಾನ ಮಾಡಿತ್ತು. ಸದನದ ಹೊರಭಾಗದಲ್ಲೇ ಪೊಲೀಸರ ಮೇಲೆಯೇ ದರ್ಪ ತೋರಿತ್ತು. ಇಂತಹ ಪಕ್ಷ ಈಗ ಬಿಜೆಪಿಗೆ ಸಂವಿಧಾನದ ಪಾಠ ಹೇಳುತ್ತಿದೆ.


ನಮ್ಮ ಶಾಸಕರು ಅಧಿಕಾರ ದುರ್ಬಳಕೆಯ ಬಗ್ಗೆ ಸ್ಪೀಕರ್ ಅವರಲ್ಲಿ ಪ್ರಶ್ನಿಸಿದ್ದು ತಪ್ಪಾ?  ಪ್ರಶ್ನಿಸಿದ ಮಾತ್ರಕ್ಕೆ ಅವರನ್ನು ಅಮಾನತು ಮಾಡಿರುವುದು ಸರ್ವಾಧಿಕಾರಿ ಧೋರಣೆ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

Post a Comment

0 Comments