ಸಾಯಿ ಮಾರ್ನಾಡ್ ಸೇವಾ ಸಂಘದಿಂದ ಆರ್ಥಿಕ ನೆರವು
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಅಮನಬೆಟ್ಟು ಇದರ ವತಿಯಿಂದ ಆಲಂಗಾರು ಪರಿಸರದ ಪೇಪರ್ ರಾಜಣ್ಣ ಅವರ ಅನಾರೋಗ್ಯ ಪೀಡಿತ ಪತ್ನಿ ಧನ್ಯ ಜೈನ್ ಅವರ ಚಿಕಿತ್ಸೆಗಾಗಿ ಭಾನುವಾರ ರೂ 10,000 ಆರ್ಥಿಕ ನೆರವು ನೀಡಲಾಯಿತು.
ಧನ್ಯ ಅವರು ಕಳೆದ 7 ವರ್ಷಗಳಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದು ಮೂರು ವರುಷಗಳಿಂದ ಹಾಸಿಗೆಯಲ್ಲೇ ಕಾಲ ಕಳೆಯುತ್ತಿದ್ದಾರೆ.
ಕಡು ಬಡವರಾಗಿರುವ ಇವರ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಸಂಘವು ಜುಲೈ ತಿಂಗಳ 2 ನೇ ಸೇವಾ ಯೋಜನೆಯಡಿ ಆರ್ಥಿಕ ಸಹಕಾರ ನೀಡಿದೆ.
ಸಾಯಿ ಮಾರ್ನಾಡ್ ಸೇವಾ ಸಂಘವು ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಹೆಜ್ಜೆ ಹಾಕಲು ಮುಂದಾಗಿದ್ದು, ಸಾಯಿ ಮಾರ್ನಾಡ್ ಕ್ರಿಕೆಟ್ ಟ್ರೋಫಿ ನಡೆಸಿ ಅದರಲ್ಲಿ ಉಳಿದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುತ್ತಾ ಬರುತ್ತಿದ್ದು ಮಾರ್ಚ್ ತಿಂಗಳಿಂದ ಇದುವರೆಗೆ 9 ಕುಟುಂಬ ಗಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಈ ಸೇವಾ ಸಂಘದಲ್ಲಿ 150 ಮಂದಿ ಸದಸ್ಯರಿದ್ದು ಎಲ್ಲರೂ ಒಟ್ಟಾಗಿ ತಿಂಗಳಿಗೆ ಒಂದಿಷ್ಟು ಹಣವನ್ನು ಸೇವಾಸಂಘಕ್ಕೆ ಮೀಸಲಿಡುತ್ತಾ ಇದ್ದಾರೆ.
0 Comments