ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

 ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ  ದಿನಾಚರಣೆ




 ಮೂಡುಬಿದಿರೆ: ಇಲ್ಲಿನ  ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಪತಂಜಲಿ ಯೋಗ ಸಮತಿ (SVT)  ಮೂಡುಬಿದಿರೆ ವಲಯದ ಮುಖ್ಯಸ್ಥರಾದ ಶರತ್ ಕುಮಾರ್,  ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಮೂಡುಬಿದಿರೆ ಅಲಂಕಾರ್ ಟೆಕ್ಸ್ ಟೈಲ್ ಇದರ ಮಾಲಕ ಹರ್ಮನ್ ಪಿಂಟೋ, ಲಯನ್ಸ್ ಕ್ಲಬ್ ಅಲಂಗಾರ್ ಇದರ ಅಧ್ಯಕ್ಷ ಲೋಯ್ಡ್ ರೆಗೋ ಹಾಗೂ ಪ್ರಾಣ ಹಿಲಿಂಗ್ ಸೆಂಟರ್ ಇದರ ವಿನೋದ್ ಬಜ್ಪೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲೆಯ ಸಂಸ್ಥಾಪಕರಾದ ಪ್ರಕಾಶ್ ಜೆ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಕು.ಸುಚಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ವಂದನಾರ್ಪಣೆಗ್ಯೆದರು. ಆ ಬಳಿಕ ಮಕ್ಕಳಿಂದ ಯೋಗ ಕಾರ್ಯಕ್ರಮ ನಡೆಯಿತು. ಅಲಂಕಾರ್ ಟೆಕ್ಸ್ ಟೈಲ್ ಮಾಲಕರಾದ ಹರ್ಮಾನ್ ಪಿಂಟೋ ಹಾಗೂ ಲಯನ್ಸ್ ಕ್ಲಬ್ ಅಲಂಗಾರ್ ವತಿಯಿಂದ ಮಕ್ಕಳಿಗೆ ಕೊಡೆ ಹಾಗೂ ಬಾತ್ ಟವೆಲ್ ವಿತರಿಸಿದರು ನಾಯಕ್ ಬ್ರದರ್ಸ್ ಮೂರು ಕಾವೇರಿ ಇವರು ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಿದರು.

Post a Comment

0 Comments

Advertisement