ಅಪಘಾತಕ್ಕೀಡಾದ ಶ್ರೀದೇವಿ ಭೇಟಿಯಾದ ನಳಿನ್ ಕುಮಾರ್:ಸಂಸದರಿಗೆ ಧನ್ಯವಾದ ತಿಳಿಸಿದ ಕುಟುಂಬಸ್ಥರು

ಜಾಹೀರಾತು/Advertisment
ಜಾಹೀರಾತು/Advertisment

 ಅಪಘಾತಕ್ಕೀಡಾದ ಶ್ರೀದೇವಿ ಭೇಟಿಯಾದ ನಳಿನ್ ಕುಮಾರ್:ಸಂಸದರಿಗೆ ಧನ್ಯವಾದ ತಿಳಿಸಿದ ಕುಟುಂಬಸ್ಥರು




ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಶ್ರೀದೇವಿ ಅವರ ಆರೋಗ್ಯ ವಿಚಾರಿಸಿದರು.

 

ಈ ವೇಳೆ ಚಿಕಿತ್ಸೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಸಂಸದರು ತಿಳಿಸಿದ್ದು ಈ ಬಗ್ಗೆ ವೈದ್ಯರ ಬಳಿಯೂ ಮಾತುಕತೆ ನಡೆಸಿದರು.


ಅಪಘಾತಕ್ಕೀಡಾದ ಮಾಹಿತಿ ತಿಳಿದ ಕೂಡಲೇ ದೆಹಲಿಯಿಂದಲೇ ಹಣಕಾಸಿನ ನೆರವು ನೀಡಿದ್ದ ಸಂಸದರಿಗೆ ಶ್ರೀದೇವಿ ಕುಟುಂಬಸ್ಥರು ಧನ್ಯವಾದ ತಿಳಿಸಿದರು.


ಈ ಸಂದರ್ಭದಲ್ಲಿ, ಶಾಸಕರಾದ ಡಾ. ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

Post a Comment

0 Comments