ಇಂದು ನೆಲ್ಲಿಕಾರು ಗ್ರಾಮ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ನಬಾರ್ಡ್ , ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ನೆಲ್ಲಿಕಾರು ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ {PMJJBY} ಹಾಗೂ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ [PMSBY] ನೋಂದಣಿ ಅಭಿಯಾನದ ಕುರಿತು ಗ್ರಾಮದ ಜನರಿಗೆ *ಆರ್ಥಿಕ ಸಾಕ್ಷರತ* ಶಿಬಿರವನ್ನು ಆಯೋಜನೆ ಮಾಡಲಾಯಿತು ಶಿಬಿರದ ಸಂಪನ್ಮೂಲ ವ್ಯಕ್ತಿ ಲತೇಶ್ ರವರು ಯೋಜನೆಯ ಸವಿವರ ಮಾಹಿತಿಯನ್ನು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡಿದರು ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮೂಡಬಿದ್ರೆ ಶಾಖೆಯ ಪ್ರಬಂಧಕ ರಾದ ಜಿತಿನ್ ಥೋಮಸ್ ಹಾಗೂ ಹೊಸ್ಮಾರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯ ಪ್ರಬಂಧಕರಾದ ಮರಿಯಾ ಜೆ.
ಡಿ 'ಸಿಲ್ವ ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸಿದರು , ಸಭಾ ವೇದಿಕೆಯಿಂದ ಉಪಾಧ್ಯಕ್ಷರಾದ ಶಶಿಧರ ಎಂ ರವರು ಗ್ರಾಮೀಣ ಜನತೆಗೆ ಇಂತಹ ಮಾಹಿತಿ ಶಿಬಿರದಿಂದ ಬಹಳ ಉಪಯುಕ್ತವಾಗಿದೆ ಎಂದರು ಸಭಾಧ್ಯಕ್ಷತೆ ವಹಿಸಿದ್ದ ಸುಶೀಲ ರವರು ಈ ರೀತಿಯ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಡಿ ಬಡವರಿಗೆ ಕಡಿಮೆ ಮೊತ್ತದ ಪ್ರೀಮಿಯಂ ನಿಂದ ದೊಡ್ಡ ಮೊತ್ತದ ವಿಮೆ ದೊರೆಯುವುದರಿಂದ ಬಹಳಷ್ಟು ಉಪಯುಕ್ತವಾಗಿದೆ ಈ ಸಭೆಗೆ ಬಂದವರು ಇತರರಿಗೂ ಮಾಹಿತಿಯನ್ನು ಹಂಚಿಕೊಳ್ಳಿರಿ ತಿಳಿ ಹೇಳಿದರು ..ಸದಸ್ಯರಾದ ಸಾಧು , ಲಲಿತ, ಮೋಹಿನಿ , ಜಯಂತ ಹೆಗ್ಡೆ , ಉದಯ , ಆಶಾಲತ , ಜಿನೇಂದ್ರ ಜೈನ್ ವೇದಿಕೆಯಲ್ಲಿ ಇದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ರವರು ವಂದನಾರ್ಪಣೆ ನೀಡಿದರು ಪಂಚಾಯತ್ ಸಿಬ್ಬಂದಿಗಳಾದ ರೇಣುಕ , ಪ್ರಮೀಳಾ ಲಕ್ಷ್ಮಣ ಹಾಗೂ ಪ್ರಜ್ಞಾ ರವರು ಸಹಕರಿಸಿದರು.
0 Comments