ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ತಂಡದಿಂದ ಹಲ್ಲೆ, ಪ್ರಕರಣ ದಾಖಲು

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ತಂಡದಿಂದ  ಹಲ್ಲೆ, ಪ್ರಕರಣ ದಾಖಲು 



 ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯದ ಗ್ರಾಮದ ಲಾಡಿ ಬಳಿಯ "ಮಂಗಳೂರು ರೆಸ್ಟೋರೆಂಟ್" ಬಳಿ ಏಳು ಮಂದಿಯ ತಂಡವೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಬೈಕ್ ನಿಲುಗಡೆಗೆ ಜಾಗ ಬಿಟ್ಟು ಕೊಡದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಮೂಡುಬಿದಿರೆ ನಿವಾಸಿಗಳಾದ ಅಬೂಬಕರ್ (57) ಮತ್ತು ಅಜ್ಮಲ್ (23) ಎಂಬವರ ಮೇಲೆ 7 ಮಂದಿಯ ತಂಡ  ಹಲ್ಲೆ ನಡೆಸಿದೆ .

 ಸಿನಾನ್, ಸಿರಾಜ್, ಹಸೈನಾರ್ ಮತ್ತು ನೌಶಾದ್ ಅವರನ್ನೊಳಗೊಂಡ ತಂಡವು  ಜಗಳವಾಡಿದ ನಂತರ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿದೆ. ಅಜ್ಮಲ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಮೂಡುಬಿದಿರೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments