ತಿಮರೋಡಿ ಅಪ್ಪನಿಗೆ ಹುಟ್ಟಿದ್ದರೆ ಕಾನತ್ತೂರಿಗೆ ಬರಲಿ-ಧೀರಜ್ ಕೆಲ್ಲ,ಉದಯ್ ಜೈನ್,ಮಲ್ಲಿಕ್ ಜೈನ್ ಸವಾಲು
ದೇಶವನ್ನೇ ಬೆಚ್ಚಿ ಬೀಳಿಸುವಂತಹ ಅತ್ಯಾಚಾರಕ್ಕೊಳಗಾದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ನಮ್ಮದು ಎಳ್ಳಷ್ಟೂ ಪಾತ್ರ ಇಲ್ಲ. ನಮ್ಮ ಮೇಲೆ ಪದೇಪದೇ ಆರೋಪ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅಪ್ಪನಿಗೇ ಹುಟ್ಟಿದ್ದರೆ ಕಾನತ್ತೂರು ದೇವಸ್ಥಾನಕ್ಕೆ ಬರಲಿ. ಮಾಧ್ಯಮದ ಸಮ್ಮುಖದಲ್ಲೇ ಪ್ರಮಾಣ ಮಾಡಲು ಸಿದ್ಧರಿದ್ದೇವೆ ಎಂದು ಕೊಲೆ ಆರೋಪ ಹೊತ್ತಿರುವ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಹಾಗೂ ಮಲ್ಲಿಕ್ ಜೈನ್ ಸುದ್ಧಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.
ಅತ್ಯಾಚಾರ ಅಮಾನವೀಯ. ನಮಗೂ ಹೆಂಡತಿ ಮಕ್ಕಳು ಇದ್ದಾರೆ. ಆದರೆ ನಮ್ಮ ಮೇಲಿನ ಆರೋಪವನ್ನು ಎಲ್ಲಾ ನ್ಯಾಯಾಲಯವೂ ತಳ್ಳಿ ಹಾಕಿದೆ. ಆದರೆ ಮಹೇಶ್ ಶೆಟ್ಟಿ ತಿಮರೋಡಿ ಸುಖಾಸುಮ್ಮನೆ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ನಾವು ಈಗಾಗಲೇ ಕಾನತ್ತೂರು ದೇವಸ್ಥಾನಕ್ಕೆ ಅರ್ಜಿ ಹಾಕಿದ್ದೇವೆ. ಅಲ್ಲಿ ಬಂದು ನಮ್ಮ ವಚನ ಎದುರಿಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
0 Comments