ಕಗ್ಗದ ಬೆಳಕಲ್ಲಿ ಸಾಕ್ಷಾತ್ಕಾರವಿದೆ
: ಜಿ. ಎಸ್ ನಟೇಶ್
ಮೂಡಬಿದಿರೆ: ಡಿ.ವಿ.ಜಿ ಯವರ ಕಗ್ಗದಲ್ಲಿ ದೈವ ಸಾಕ್ಷಾತ್ಕಾರವಿದೆ. ಜೀವನಾನುಭವದ ಸತ್ವವಿದೆ. ಗೀತೆಯ ಬೆಳಕಿದೆ. ಅದರ ಸಾನಿಧ್ಯವಲಯಕ್ಕೆ ಸಿಕ್ಕಿಬಿದ್ದವುಗಳೆಲ್ಲ ಜ್ಯೋತರ‍್ಮಯವಾಗುತ್ತದೆ. ಕಗ್ಗ ದಾರ್ಶನಿಕ ದರ್ಶನ ಶಾಸ್ತçವಾಗಿ ಮನುಕುಲ ಕಂಡ ಶ್ರೇಷ್ಠ ಪ್ರದೀಪ್ತಿ ಎಂದು ಖ್ಯಾತ ವಾಗ್ಮಿ ಜಿ. ಎಸ್ ನಟೇಶ್ ಹೇಳಿದರು.
ಅವರು ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ ‘ಕಗ್ಗದ ಬೆಳಕು’ ಕರ‍್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಪ್ರತಿಯೊಂದು ವಿದ್ಯಾರ್ಥಿಯು ಮನುಷ್ಯ ಹೃದಯಗಳನ್ನು ಮಾನವತಾದಾರದಿಂದ ಪೋಣಿಸುವ ಮಾನವತಾವಾದಿಯಾಗಲು ಮಂಕುತಿಮ್ಮನ ಕಗ್ಗ ಬೆಳಕಾಗಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್ ಆಡಳಿತ ನಿರ್ದೇಶಕ ಡಾ| ಸಂಪತ್ ಕುಮಾರ್ ಪ್ರಾಂಶುಪಾಲರಾದ ಪ್ರದೀಪ್ ಕುಮರ್ ಶೆಟ್ಟಿ ಪ್ರೌಢಶಾಲಾ ಮುಖ್ಯೋಪಾದ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಯಶಸ್ವಿನಿ ರಾಜೇಂದ್ರ ನಿರೂಪಿಸಿ ಡಾ| ವಾದಿರಾಜ್ ಕಲ್ಲೂರಾಯ ವಂದಿಸಿದರು.
0 Comments