ಅಳಿಯೂರಿನಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ
ಮೂಡುಬಿದಿರೆ: ಇಲ್ಲಿನ ಅಳಿಯೂರು ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮೂಡುಬಿದಿರೆ ಆರಕ್ಷಕ ಠಾಣೆಯ ಸಹಯೋಗದಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವು ಶುಕ್ರವಾರ ಅಳಿಯೂರು ಹೇಮಾ ಸಭಾಭವನದಲ್ಲಿ ನಡೆಯಿತು.
ಪೊಲೀಸ್ ಉಪ ನಿರೀಕ್ಷಕ ಸಿದ್ದಪ್ಪ ಮಾತನಾಡಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಪೋಷಕರು ಮನೆಯ ಹೆಣ್ಣು ಮಕ್ಕಳಿಗೆ ಹೊರಗೆ ಹೋಗಿ ಬಂದಾಗ ಯಾವ ರೀತಿ ಪ್ರಶ್ನಿಸುತ್ತಿರೋ ಅದೇ ರೀತಿ ಗಂಡು ಮಕ್ಕಳನ್ನು ಪ್ರಶ್ನಿಸಬೇಕು. ಪಿಯುಸಿಯವರೆಗೆ ಮಕ್ಕಳಿಗೆ ಮೊಬೈಲ್ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ವಾಹನಗಳನ್ನು ನೀಡಬೇಡಿ ಎಂದ ಅವರು ಹೆಚ್ಚುತ್ತಿರುವ ಆನ್ ಲೈನ್ ಮೂಲಕ ಓ.ಟಿ.ಪಿ ಯನ್ನು ಪಡೆದು ಹಣ ಕದಿಯುವ ಜಾಲವೂ ಹೆಚ್ಚು ಇದ್ದು ಯಾವುದೇ ಅನಾಮಿಕ ಕರೆಗಳು ಬಂದರೆ ಓ.ಟಿ.ಪಿಯನ್ನು ತಿಳಿಸುವಂತೆ ಹೇಳಿದರೆ ಯಾವುದೇ ಕಾರಣಕ್ಕೂ ಓ.ಟಿ.ಪಿ ಶೇರ್ ಮಾಡದಿರಿ ಎಚ್ಚರಿಕೆ ನೀಡಿದರು.
ಕ್ರೈಂ ವಿಭಾಗದ ಪೊಲೀಸ್ ಉಪನಿರೀಕ್ಷಕ ದಿವಾಕರ್ ರೈ ಅವರು ಮಾದಕ ವ್ಯಸನ ಮುಕ್ತ ಜಾಗೃತಿಯ ವಿಷಯದ ಕುರಿತು ಮಾಹಿತಿ ನೀಡಿ, ಸಮಾಜವನ್ನು ಸರಿಪಡಿಸುವಲ್ಲಿ ಎಲ್ಲರಿಗೂ ಜವಾಬ್ದಾರಿ ಇದೆ. ಇಂದಿನ ಯುವಜನತೆ ಶಾರೀರಿಕ, ಮಾನಸಿಕ ಒತ್ತಾಡಕ್ಕೆ ಒಳಗಾಗಿ, ಅಥವಾ ಸ್ನೇಹಿತರ ಒತ್ತಾಯದ ಮೇರೆಗೆ, ಕುತೂಹಲದ ಸಲುವಾಗಿ ಹಲವಾರು ಕಾರಣಗಳಿಂದ ಮಾದಕವ್ಯಸನಗಳಿಗೆ ಒಳಗಾಗುತ್ತಾರೆ. ಇಂತಹ ದುಶ್ಚಟಗಳಿಗೆ ಬಲಿಯಾದರೆ ನಮ್ಮ ನೆರೆ- ಹೊರೆಯವರೇ ದೂರವಿಡುತ್ತಾರೆ. ಇಂದಿನ ವಿದ್ಯಾರ್ಥಿಗಳೇ ನಾಳೆಯ ಪ್ರಜೆಗಳು ಆದ್ದರಿಂದ ವಿದ್ಯೆಯಿಂದ ಅಭಿವೃದ್ಧಿಯನ್ನು ಹೊಂದಿ ಸುತ್ತಮುತ್ತಲಿನ ವ್ಯವಸ್ಥೆಯನ್ನು ಸುವ್ಯವಸ್ಥಿತ ರೀತಿಯಲ್ಲಿ ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕಿವಿ ಮಾತು ಹೇಳಿದರು.
ಮಕ್ಕಳ ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸದೇ ಸೀರಿಯಲ್ , ಟಿವಿ ನೋಡುತ್ತಾ ಮಗ್ನರಾಗಿ ಮಕ್ಕಳ ಕಡೆ ಗಮನಹರಿಸದೇ ನಿರ್ಲಕ್ಷ್ಯಿಸದಿರಿ, ನಿಮ್ಮ ಸಮಯದಲ್ಲಿ ಮಕ್ಕಳಿಗೂ ಸಮಯ ನೀಡಿ ಅವರ ವರ್ತನೆಗಳನ್ನು ಗಮನಿಸಿ ಜಾಗೃತಿ ವಹಿಸಿ,ಮಕ್ಕಳಿಗಾಗಿ ದುಂದುವೆಚ್ಚ ಮಾಡುವುದನ್ನು ನಿಲ್ಲಿಸಿ ಅವರಿಗೆ ಯಾವುದೇ ಅಗತ್ಯವಿದೆ ಎಂಬುದನ್ನು ಅರಿತು ಮನೆಯಲ್ಲಿರುವ ಮಕ್ಕಳ ಕಡೆಯು ಗಮನಹರಿಸಿ ಎಂದ ಅವರು ಇತ್ತೀಚಿಗೆ ಹೆಚ್ಚುತ್ತಿರುವ ಅಪಘಾತಗಳಲ್ಲಿ ಜೀವ ಕಳೆದುಕೊಂಡ 100 ಪ್ರಕರಣಗಳಲ್ಲಿ 99 ಪ್ರಕರಣಗಳು ಹೆಲ್ಮೆಟ್ ರಹಿತ ಸವಾರಿಯಲ್ಲಿ ಸಂಚಾರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದಿರಿ. ಲೈಸನ್ಸ್ ಮತ್ತು ಇನ್ಸೂರೆನ್ಸ್ ಇಲ್ಲದೇ ಯಾವುದೇ ವಾಹನಗಳನ್ನು ಓಡಿಸದಿರಿ. ಪೊಲೀಸರು ದಂಡ ಹಾಕುವುದರ ಮೂಲಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ನಿಮ್ಮನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ದಂಡವನ್ನು ಹಾಕುತ್ತಾರೆ ಎಂದು ಅವರು ತಿಳಿಸಿದರು.
.
ಹೇಮಾ ಸಭಾಭವನದ ಮಾಲಕಿ ಹೇಮಾವತಿ, ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ ಅಳಿಯೂರು, ಸದಸ್ಯ ಅಶ್ವತ್ ಪಣಪಿಲ ಉಪಸ್ಥಿತರಿದ್ದರು.
0 Comments