ಮೂಡುಬಿದಿರೆ: 12 ಗ್ರಾಪಂ ಮೀಸಲಾತಿ ಪ್ರಕಟ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: 12 ಗ್ರಾಪಂ ಮೀಸಲಾತಿ ಪ್ರಕಟ 





ಮೂಡುಬಿದಿರೆ: ಚುನಾವಣೆ ಆಯೋಗದ ನಿರ್ದೇಶನದಂತೆ ಮೂಡುಬಿದಿರೆ ತಾಲೂಕಿನ 12 ಗ್ರಾಪಂಗಳಿಗೆ ಮುಂದಿನ ಎರಡುವರೆ ವರ್ಷಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಹಂಚಿಕೆ ಪ್ರಕ್ರಿಯೆಯು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್ ಅಧ್ಯಕ್ಷತೆಯಲ್ಲಿ ಬುಧವಾರ ಕನ್ನಡ ಸಭವನದಲ್ಲಿ ನಡೆಯಿತು. 

ಮೀಸಲಾತಿ ವಿವರಗಳು:

ನೆಲ್ಲಿಕಾರು:ಅಧ್ಯಕ್ಷ ಸ್ಥಾನ (ಸಾಮಾನ್ಯ) ಉಪಾಧ್ಯಕ್ಷ ಸ್ಥಾನ(ಪರಿಶಿಷ್ಟ ಜಾತಿ ಮಹಿಳೆ), ದರೆಗುಡ್ಡೆ:ಅಧ್ಯಕ್ಷ(ಸಾಮಾನ್ಯ)ಉಪಾಧ್ಯಕ್ಷೆ(ಹಿಂದುಳಿದ ವರ್ಗ ಎ ಮಹಿಳೆ), ಪಡುಮಾರ್ನಾಡು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷೆ (ಹಿಂದುಳಿದ ವರ್ಗ ಎ ಮಹಿಳೆ), ಬೆಳುವಾಯಿ ಅಧ್ಯಕ್ಷ(ಸಾಮಾನ್ಯ)ಉಪಾದ್ಯಕ್ಷೆ (ಸಾಮಾನ್ಯ ಮಹಿಳೆ), ಪಾಲಡ್ಕ ಅಧ್ಯಕ್ಷೆ(ಪರಿಶಿಷ್ಟಪಂಗ ಮಹಿಳೆ)ಉಪಾಧ್ಯಕ್ಷ (ಸಾಮಾನ್ಯ), ಕಲ್ಲಮುಂಡ್ಕೂರು ಅಧ್ಯಕ್ಷ (ಹಿಂದುಳಿದ ವರ್ಗ ಬಿ), ಉಪಾಧ್ಯಕ್ಷೆ (ಸಾಮಾನ್ಯ ಮಹಿಳೆ), ಪುತ್ತಿಗೆ ಅಧ್ಯಕ್ಷ (ಹಿಂದುಳಿದ ವರ್ಗ ಎ ಮಹಿಳೆ)ಉಪಾಧ್ಯಕ್ಷ (ಸಾಮಾನ್ಯ), ತೆಂಕಮಿಜಾರು ಅಧ್ಯಕ್ಷೆ(ಹಿಂದುಳಿದ ವರ್ಗ ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹೊಸಬೆಟ್ಟು ಅಧ್ಯಕ್ಷ(ಹಿಂದುಳಿದ ವರ್ಗ ಎ), ಉಪಾಧ್ಯಕ್ಷೆ (ಪರಿಶಿಷ್ಟ ಪಂಗಡ ಮಹಿಳೆ), ಇರುವೈಲು ಅಧ್ಯಕ್ಷೆ (ಪರಿಶಿಷ್ಟ ಜಾತಿ ಮಹಿಳೆ)ಉಪಾಧ್ಯಕ್ಷರು(ಹಿಂದುಳಿದ ವರ್ಗ ಬಿ), ಶಿರ್ತಾಡಿ ಅಧ್ಯಕ್ಷೆ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ವಾಲ್ಪಾಡಿ ಅಧ್ಯಕ್ಷೆ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ವರ್ಗ ಎ). ಅಡಿಷನಲ್ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮೂಡುಬಿದಿರೆ ತಹಶಿಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕಚನೂರು, ತಾಲ್ಲೂಕು ಪಂಚಾಯಿತಿ ಮುಖ್ಯ ಕರ‍್ಯನಿರ್ವಹಣಾಧಿಕಾರಿ ದಯಾವತಿ ಉಪಸ್ಥಿತರಿದ್ದರು.

Post a Comment

0 Comments