ನನ್ನ ನಳಿನ್ ನಡುವೆ ಯಾವುದೇ ಅಂತರವಿಲ್ಲ-ಗೊಂದಲ ಬಗೆಹರಿಸಿ ಒಟ್ಟಿಗೆ ಹೋಗೋಣ:ಅರುಣ್ ಪುತ್ತಿಲ

ಜಾಹೀರಾತು/Advertisment
ಜಾಹೀರಾತು/Advertisment

 ನನ್ನ ನಳಿನ್ ನಡುವೆ ಯಾವುದೇ ಅಂತರವಿಲ್ಲ-ಗೊಂದಲ ಬಗೆಹರಿಸಿ ಒಟ್ಟಿಗೆ ಹೋಗೋಣ:ಅರುಣ್ ಪುತ್ತಿಲ



ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರ ಮೇಲೆ ಹಿಂದಿನ ಅಭಿಮಾನವೇ ಇದೆ. ಇಲ್ಲಿ ಸ್ಥಳೀಯವಾಗಿ ಅನೇಕ ಗೊಂದಲಗಳಿವೆ. ಆ ಗೊಂದಲಗಳನ್ನು ಬಗೆಹರಿಸಿ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಒಟ್ಟಾಗಿ ಹೋಗಬೇಕೆಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. 


ಖಾಸಗಿ ಸುದ್ಧಿ ಸಂಸ್ಥೆಯ ಜೊತೆಗೆ ಚರ್ಚೆಯ ಸಂದರ್ಭದಲ್ಲಿ ಅರುಣ್ ಪುತ್ತಿಲ ಈ ಮಾತುಗಳನ್ನು ಹೇಳಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಅರುಣ್ ಪುತ್ತಿಲಗೆ ಬಿಜೆಪಿ ಟಿಕೆಟ್ ನೀಡದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಕಟೀಲು ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

Post a Comment

0 Comments