ಆಳ್ವಾಸ್‌ನಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮೂಡುಬಿದಿರೆ : ವಿಶ್ವ ಯೋಗ ದಿನದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಮುಂಡುದೆಗುತ್ತು ಕೆ. ಅಮರನಾಥ ಶೆಟ್ಟಿ ಹಾಗೂ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ ಸಭಾಂಗಣದಲ್ಲಿ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.
ಯೋಗಾಭ್ಯಾಸಕ್ಕೆ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿಪಂಡಿತಾಚಾರ್ಯವರ್ಯ ಸ್ವಾಮೀಜಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ , ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಭ್ಯಾಸ ಮಾಡಿದರು. ಸುಮಾರು ಒಂದು ಗಂಟೆ ಕಾಲ ಪ್ರಾಣಾಯಾಮ, ಆಸನ, ಧ್ಯಾನ, ವಿಶ್ರಾಂತಿ ಯೋಗಗಳನ್ನು ಮಾಡಿದರು. ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಯೋಗಾಭ್ಯಾಸ ನಡೆಯಿತು. ಈ ಹಿಂದೆ ಯೋಗಾಥಾನ್ ಹಾಗೂ ಜಾಂಬೂರಿ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಾಮೂಹಿಕ ಯೋಗಾಭ್ಯಾಸ ಮಾಡಿ ಗಮನ ಸೆಳೆದಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
*ರೋಟರಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ*
ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಸನ ಧ್ಯಾನ ಪ್ರಾಣಾಯಾಮಗಳನ್ನು ಮಾಡುವ ಮೂಲಕ ಆಚರಿಸಲಾಯಿತು. ಮುಲ್ಕಿಯ ಯೋಗ ಗುರು ರಾಘವೇಂದ್ರ ರಾವ್ ಇವರು ಯೋಗಾಸನ ಧ್ಯಾನ ಪ್ರಾಣಾಯಾಮಗಳನ್ನು ಕಲಿಸಿಕೊಟ್ಟರು ಶಾಲಾ ಸಂಚಾಲಕ ಪ್ರವೀಣ್ ಚಂದ್ರ ಜೈನ್ ದೀಪ ಬೆಳಗಿಸಿ ಶುಭ ಹಾರೈಸಿದರು ಮುಖ್ಯೋಪಾಧ್ಯಾಯನಿ ತಿಲಕಾ ಅನಂತ ವೀರ ಜೈನ್ ಸ್ವಾಗತಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ ದೈಹಿಕ ಶಿಕ್ಷಕ ಸುಧೀರ್ ಕುಮಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ: ಅಂತರಾಷ್ಟ್ರೀಯ ಯೋಗ ದಿನಾಚರನೆ
ಮೂಡುಬಿದಿರೆ : ಅಂತರಾಷ್ಟ್ರೀಯ ಯೋಗ ದಿನಾಚರನೆಯು ಬುಧವಾರದಂದು ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಟ್ಟಡದಲ್ಲಿ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಉದ್ಘಾಟನೆಯನ್ನು ಮೂಡಬಿದ್ರೆಯ ಮೈನ್ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ನಾಗರತ್ನ ಶಿರೂರು ಇವರು ದೀಪ ಬೆಳಗಿಸುವುದರ ಮೂಲಕ ನೆರೆವೇರಿಸಿದರು. ಉದ್ಘಾಟನಾ ಭಾಷಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಯಾವಾಗ ಆರಂಭವಾಯಿತು ಮತ್ತು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಯೋಗ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ವಸುದೈವ ಕುಟುಂಬಕಂ ಎಂಬ ಧ್ಯೇಯವನ್ನು ಮಕ್ಕಳಿಗೆ ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಶಿಕಾಂತ್ ವೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಮೂಡುಬಿದಿರೆ ಪುರಸಭೆಯ ಸದಸ್ಯೆ ಶ್ವೇತಾ ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ರಾಜೇಶ್ ಸುವರ್ಣ,ತಾಯಂದಿರ ಸಮಿತಿಯ ಅಧ್ಯಕ್ಷೆ ಆರತಿ ಜೈನ್ ಉಪಸ್ಥಿತರಿದ್ದರು.
ಶಾಲಾ ಹಿರಿಯ ಶಿಕ್ಷಕಿ ಮಂಜುಳಾ ಜೈನ್ ಮಕ್ಕಳಿಗೆ ತರಬೇತಿ ನೀಡಿದರು. ನಂತರ ೨೦ ನಿಮಿಷಗಳ ಕಾಲ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಪ್ರಸ್ತುತಗೊಂಡಿತು.
ಎಂ. ಕೆ ಶೆಟ್ಟಿ ಸ್ಕೂಲ್‌ನಲ್ಲಿ ಅಂತರಾಷ್ಟ್ರೀಯ ಯೋಗ
ಮೂಡಬಿದಿರೆ: ಇಲ್ಲಿನ ಕಲ್ಲಬೆಟ್ಟು ಎಂ. ಕೆ ಶೆಟ್ಟಿ ಸೆಂಟ್ರಲ್ ಸೆಲೆಬಸ್ ಶಾಲೆಯಲ್ಲಿ
ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ದೈನಂದಿನ ಬದುಕಿನಲ್ಲಿ ಯೋಗದ ಮಹತ್ವವನ್ನು ತಿಳಿಯಪಡಿಸಲಾಯಿತು.
ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಯೋಗ ದಿನಾಚರಣೆಗೆ ಮೆರುಗನ್ನು
ನೀಡಿದರು. ಶಾಲಾ ಉಪ ಪ್ರಾಂಶುಪಾಲೆ ವಿಮಲಾ ಹಾಗೂ ಶಿಕ್ಷಕಿ ರಂಜಿತಾ
ಯೋಗ ಪ್ರಾತ್ಯಕ್ಷಿಕೆಗಳನ್ನು ನಿರ್ದೇಶಿಸಿದರು.
ಶಾಲಾ ಆಡಳಿತ ನಿರ್ದೇಶಕ ಡಾ|ಸಂಪತ್ ಕುಮಾರ, ಶೆಕ್ಷಣಿಕ ನಿರ್ದೇಶಕ
ಪುಷ್ಪರಾಜ್, ಶಾಲಾ ಪ್ರಾಂಶುಪಾಲೆ ದಿವ್ಯಾ .ಎಸ್.ನಾಯಕ್, ಶಿಕ್ಷಕ ಹಾಗೂ
ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೂಡಬಿದಿರೆಯ ಎಕ್ಸಲೆಂಟಿನಲ್ಲಿ ವಿಶ್ವಯೋಗ ದಿನಾಚರಣೆ
ಮೂಡುಬಿದಿರೆ : ಮನಸ್ಸು ಮತ್ತುದೇಹದ ಪ್ರಪುಲ್ಲತೆಗೆ ಯೋಗವು ಅತ್ಯಂತ ಸರಳ ವಿಧಾನ ವೆಂದು ಖ್ಯಾತ ಯೋಗ ತರಬೇತುದಾರ ರಾಘವೇಂದ್ರರಾವ್‌ಅಭಿಪ್ರಾಯಪಟ್ಟರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು ಪ್ರಸ್ತುತ ಒತ್ತಡಮಯ ವಾತಾವರಣದಲ್ಲಿ ಮಾನಸಿಕ ನೆಮ್ಮದಿಯನ್ನು ಸಾಧಿಸಲು ಹಾಗೂ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಲು ಯೋಗಾಸನಗಳು ಅತ್ಯಂತ ಪ್ರಯೋಜನಕಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಶ್ಮಿತ ಜೈನ್‌ಎಕ್ಸಲೆಂಟ್ ಸಂಸ್ಥೆಯಲ್ಲಿ ದೇಶೀಯ ಸಾಂಸ್ಕೃತಿಕ ವಿಚಾರಗಳಿಗೆ ಒತ್ತುಕೊಡುವುದು ಹೆಮ್ಮೆಯ ವಿಚಾರ ಎಂದು ಅಭಿಮಾನ ವ್ಯಕ್ತಪಡಿಸಿದರು. ಅಂತರಾಷ್ಟ್ರೀಯ ಯೋಗ ಸಾಧಕಿ ವಿದ್ಯಾರ್ಥಿನಿ
ಐಶಾನಿ.ಜಿ ರೈ ಅವರಿಂದ ಯೋಗ ಪ್ರದರ್ಶನ ನಡೆಯಿತು. ಎಕ್ಸಲೆಂಟ್ ಸಂಸ್ಥೆಯಆಡಳಿತ ನಿರ್ದೇಶಕರಾದಡಾ| ಸಂಪತ್‌ಕುಮಾರ್‌ಹಾಗೂ ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್‌ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಖ್ಯಾತಯೋಗ ತರಬೇತುದಾರ ರಾಘವೇಂದ್ರಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಮೂಡುಬಿದಿರೆ. ಇಲ್ಲಿನ ಬೆಳುವಾಯಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಸದಸ್ಯರು ಆರೋಗ್ಯ ಕಾರ್ಯಕರ್ತೆ ಗೀತಾ ಆಶಾ ಕಾರ್ಯಕರ್ತೆ ಶೋಭಾ ನಿವೃತ್ತ ಮುಖ್ಯೋಪಾಧ್ಯಾಯ ವಾಸುದೇವ ಆಚಾರ್ಯ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಶೆಣೈ ಅತಿಥಿ ಶಿಕ್ಷಕರು ಸ್ವಯಂಸೇವಕ ಶಿಕ್ಷಕರು ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಯೋಗ ದಿನಾಚರಣೆಯನ್ನು ನಡೆಸಿದರು.
ಕಡಲಕೆರೆ ಪ್ರೇರಣಾ ಶಿಶು ಮಂದಿರದಲ್ಲಿ ಯೋಗ
ಮೂಡುಬಿದಿರೆ ಕಡಲಕೆರೆ ಬಳಿಯಿರುವ ಪ್ರೇರಣಾ ಶಿಶು ಮಂದಿರ- ಸೈಂಟ್ ಇಗ್ನೇಷಿಯಸ್ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು
.
0 Comments