ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.ಅವರು ಬೂತ್ ನಂಬರ್ 63 ರ ಲೇಬರ್ ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತನ್ನ ಮತವನ್ನು ಚಲಾಯಿಸಿದರು.
ಜೆಡಿಎಸ್ ಅಭ್ಯರ್ಥಿ ಡಾ.ಅಮರಶ್ರೀ ಮತದಾನ
ಮೂಡುಬಿದಿರೆ: ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಪುತ್ರಿ, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಈ ಬಾರಿಯ ಜೆಡಿಎಸ್ ಅಭ್ಯರ್ಥಿ ಡಾ.ಅಮರಶ್ರೀ ಶೆಟ್ಟಿ ಅವರು ಬೂತ್ ಸಂಖ್ಯೆ 65ರ ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಕಡೆಪಲ್ಲ ಗಾಂಧಿನಗರ ಇಲ್ಲಿಗೆ ತನ್ನ ತಾಯಿ ಜಯಶ್ರೀ ಅಮರನಾಥ ಶೆಟ್ಟಿ ಅವರ ಜತೆಗೂಡಿ ಬಂದು ಮತಚಲಾಯಿಸಿದರು.
ಬೂತ್ ನಂಬರ್ 64 ಬಿಇಒ ಕಛೇರಿಯಲ್ಲಿ ಮೂಲ್ಕಿ ಮೂಡುಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ 7.20 ಕ್ಕೆ ತನ್ನ ಮತದಾನ ಮಾಡುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿದರು.
ಇದಕ್ಕೂ ಮೊದಲು ಮೂಡುಬಿದಿರೆಯ ಒಡೆಯ ಹನುಮಂತ ದೇವಸ್ಥಾನಕ್ಕೆ ಕೋಟ್ಯಾನ್ ಭೇಟಿ ನೀಡಿ ಸಿಯಾಳ ಹರಕೆ ಸಲ್ಲಿಸಿದರು
☝️ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ತನ್ನ ಪತ್ನಿ ಶಾಲಿನಿಯೊಂದಿಗೆ ಬೂತ್ ಸಂಖ್ಯೆ 65ರ ಗಾಂಧಿನಗರ ಶಾಲೆಯಲ್ಲಿ ತನ್ನ ಮತವನ್ನು ಚಲಾಯಿಸಿದರು. ಈ ಸಂಧರ್ಭದಲ್ಲಿ ಪುರಸಭಾ ಸದಸ್ಯೆ ದಿವ್ಯಾ ಜಗದೀಶ್ ಅವರು ತನ್ನ ಮತವನ್ನು ಹಾಕಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಪುರಸಭಾ ವ್ಯಾಪ್ತಿಯ ಜೈನ್ ಪೇಟೆಯಲ್ಲಿರುವ ಡಿ.ಜೆ.ವಿ.ವಿ .ಸಂಘದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಪತ್ನಿ ಮಂಜುಳಾ ಅಭಯಚಂದ್ರ ಜೈನ್ ಅವರ ಜತೆಗೂಡಿ ಮನೆಯಿಂದ ಬೂತ್ ವರೆಗೆ ನಡೆದುಕೊಂಡು ಬಂದು ಮತದಾನ ಮಾಡುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿದರು.
☝️ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಡಿ.ಜೆ.ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಬೆಳಿಗ್ಗೆ 7 ಗಂಟೆಗೆ ಮೊದಲಿಗರಾಗಿ ಮತದಾನಗೈದರು.
☝️ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ನಿವಾಸಿಯಾಗಿದ್ದು ಇದೀಗ ಕಾರ್ಕಳದಲ್ಲಿರುವ ತನ್ನ ಮಗನ ಮನೆಯಲ್ಲಿ ವಾಸಿಸುತ್ತಿರುವ 76ರ ಹರೆಯದ ವೃದ್ಧೆ ವಾರಿಜಾ ಪೂಜಾರ್ತಿ ಅವರು ಹಂಡೇಲು ಶಾಲೆಗೆ ತನ್ನ ಪುತ್ರನೊಂದಿಗೆ ಆಗಮಿಸಿ ಮತದಾನಗೈದರು.
ಮೂಡುಬಿದಿರೆ: ಕಂಬಳದ ಉಸೇನ್ ಬೋಲ್ಟ್ ಎಂದು ಗುರುತಿಸಿಕೊಂಡಿರುವ, ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು 89 ಬೂತ್ ಸಂಖ್ಯೆಯ ಅಶ್ವತ್ಥಪುರ ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಹಾಕುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿದರು.
ಮೂಡುಬಿದಿರೆಯಲ್ಲಿ 83ರ ಹರೆಯದ ವಯೋವೃದ್ಧ ಡಿ. ಶ್ರೀನಿವಾಸ್ ಕಿಣಿ
ತನ್ನ ಪತ್ನಿ ಪದ್ಮಾವತಿ ಅವರೊಂದಿಗೆ ಮತಗಟ್ಟೆಗೆ ಬಂದು ಮತಚಲಾಯಿಸಿ ಸಂಭ್ರಮಿಸಿದರು
ಮೊದಲ ಮತದಾನ ಖುಷಿ
ಮೂಡುಬಿದಿರೆ: ಶಿಕ್ಷಕ ಪ್ರಸನ್ನ ಶೆಣೈ ಅವರ ಪುತ್ರ ಪ್ರಜ್ವಲ್ ಪಿ.ಶೆಣೈ ಅವರು ತನ್ನ ಹೆತ್ತವರೊಂದಿಗೆ ತೆರಳಿ ಹೋಲಿ ರೋಜರಿ ಹೈಸ್ಕೂಲಿನಲ್ಲಿರುವ ಬೂತ್ ನಲ್ಲಿ ಮೊದಲ ಮತದಾನಗೈದರು.
ಗುರುತಿನ ಚೀಟಿ ನನ್ನ ಕೈ ಸೇರಿದ ದಿನದಿಂದಲೂ ಮತದಾನ ಮಾಡಲು ಕಾಯುತ್ತಿದ್ದೆ ಅದರಲ್ಲೂ ನಿನ್ನೆಯಿಂದ ಬಹಳ ಕಾತರದಿಂದ ಕಾದಿದ್ದೆ ಇಂದು ಮತದಾನ ಮಾಡಿದ್ದರಿಂದ ತುಂಬಾ ಖುಷಿಯನ್ನು ಅನುಭವಿಸಿದ್ದೇನೆ
0 Comments