ದಕ್ಷಿಣ ಕನ್ನಡ-ಉಡುಪಿ:ಯಾರಾಗಲಿದ್ದಾರೆ ತುಳುನಾಡಿನ ವಿಜಯಶಾಲಿಗಳು? ESCO ಸಮೀಕ್ಷೆಯಲ್ಲಿ ಕರಾವಳಿ ಭವಿಷ್ಯ

ಜಾಹೀರಾತು/Advertisment
ಜಾಹೀರಾತು/Advertisment

 ದಕ್ಷಿಣ ಕನ್ನಡ-ಉಡುಪಿ:ಯಾರಾಗಲಿದ್ದಾರೆ ತುಳುನಾಡಿನ ವಿಜಯಶಾಲಿಗಳು? ESCO ಸಮೀಕ್ಷೆಯಲ್ಲಿ ಕರಾವಳಿ ಭವಿಷ್ಯ




ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ಮೇ 13ರಂದು ಫಲಿತಾಂಶವೂ ಪ್ರಕಟವಾಗಲಿದೆ. ವಿವಿಧ ನ್ಯೂಸ್ ಚಾನೆಲ್ ಗಳು, ಪತ್ರಿಕೆಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ.ಈ ಮಧ್ಯೆ ಸುಮಾರು ಒಂದು ತಿಂಗಳಿನಿಂದ ದಕ್ಷಿಣಕನ್ನಡ ಉಡುಪಿಯಲ್ಲಿ ಬೀಡು ಬಿಟ್ಟಿರುವ ದೆಹಲಿ ಮೂಲದ ಪ್ರತಿಷ್ಠಿತ ESCO ಸಂಸ್ಥೆ ತನ್ನ ಮತಗಟ್ಟೆ ಸಮೀಕ್ಷೆಯನ್ನು ವರದಿ ಮಾಡಿದೆ.


ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಯ ಫಲಿತಾಂಶ ಮತ್ತು ಪಡೆಯುವ ಮತಗಳ ಬಗ್ಗೆ ನಿಖರ ಸಮೀಕ್ಷೆ ನುಡಿದಿದ್ದ ಈ ಸಂಸ್ಥೆಯ ವರದಿ ಕುತೂಹಲ ಕೆರಳಿಸಿದೆ.


ESCO ಸಂಸ್ಥೆಯ ಸಮೀಕ್ಷೆ.


ದಕ್ಷಿಣಕನ್ನಡ :

ಬಿಜೆಪಿ -7

ಕಾಂಗ್ರೆಸ್ -0

ಪಕ್ಷೇತರ -1


ಉಡುಪಿ :

ಬಿಜೆಪಿ -5

ಕಾಂಗ್ರೆಸ್ -0


ದಕ್ಷಿಣಕನ್ನಡ

ಮಂಗಳೂರು - ಸತೀಶ್ ಕುಂಪಲ.(ಬಿಜೆಪಿ) ಸುಮಾರು 8000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಮಂಗಳೂರು ದಕ್ಷಿಣ - ವೇದವ್ಯಾಸ್ ಕಾಮತ್ (ಬಿಜೆಪಿ) ಸುಮಾರು 25000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಮಂಗಳೂರು ಉತ್ತರ - ಭರತ್ ಶೆಟ್ಟಿ (ಬಿಜೆಪಿ)ಸುಮಾರು 32000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಪುತ್ತೂರು -ಅರುಣ್ ಕುಮಾರ್ ಪುತ್ತಿಲ(ಪಕ್ಷೇತರ)ಸುಮಾರು 5000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಸುಳ್ಯ - ಭಾಗೀರಥಿ ಮುರುಳ್ಯ (ಬಿಜೆಪಿ)ಸುಮಾರು 48000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಬೆಳ್ತಂಗಡಿ - ಹರೀಶ್ ಪೂಂಜ (ಬಿಜೆಪಿ)ಸುಮಾರು 45000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಬಂಟ್ವಾಳ - ರಾಜೇಶ್ ನಾಯ್ಕ್ (ಬಿಜೆಪಿ)ಸುಮಾರು 28000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು.


ಮೂಲ್ಕಿ-ಮೂಡಬಿದಿರೆ - ಉಮಾನಾಥ್ ಕೋಟ್ಯಾನ್ (ಬಿಜೆಪಿ)ಸುಮಾರು 32000 ಮತಗಳ ಅಂತರದಿಂದ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಉಡುಪಿ

ಕಾರ್ಕಳ - ಸುನಿಲ್ ಕುಮಾರ್ (ಬಿಜೆಪಿ)ಸುಮಾರು 28000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಉಡುಪಿ - ಯಶ್ಪಾಲ್ ಸುವರ್ಣ (ಬಿಜೆಪಿ)ಸುಮಾರು 42000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು.


ಕಾಪು -ಸುರೇಶ್ ಶೆಟ್ಟಿ ಗುರ್ಮೆ(ಬಿಜೆಪಿ)ಸುಮಾರು 32000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಗೆಲುವು.


ಕುಂದಾಪುರ - ಕಿರಣ್ ಕೊಡ್ಗಿ (ಬಿಜೆಪಿ)ಸುಮಾರು 42000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು.


ಬೈಂದೂರು - ಗುರುರಾಜ್ ಗಂಟಿಹೊಳೆ (ಬಿಜೆಪಿ) ಸುಮಾರು 18000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು.


ESCO ಸಂಸ್ಥೆ ಎಲ್ಲಾ 13 ಕ್ಷೇತ್ರಗಳಲ್ಲಿ ಸಂಚರಿಸಿ ಪ್ರತಿಯೊಂದು ಮತಗಟ್ಟೆಗೆ ಭೇಟಿ ನೀಡಿ ಈ ಸಮೀಕ್ಷೆಯನ್ನು ಪ್ರಕಟಿಸಿದೆ.

Post a Comment

0 Comments