ಕುಟುಂಬ ಸಮೇತ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಸಚಿವ ಕೋಟ
ರಾಜ್ಯದಾದ್ಯಂತ ಇಂದು ಪ್ರಜಾಪ್ರಭುತ್ವದ ಹಬ್ಬ ನಡೆಯುತ್ತಿದ್ದು ಬೆಳಿಗ್ಗೆಯಿಂದಲೇ ಮತದಾನ ಬಿರುಸು ಪಡೆದುಕೊಂಡಿದೆ. ರಾಜ್ಯದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಇಂದು ಮತದಾನ ಮಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಗ್ರಾಮ ಪಂಚಾಯತಿಯಲ್ಲಿರುವ ಮತದಾನ ಕೇಂದ್ರದಲ್ಲಿ ಪತ್ನಿ,ಮಗಳು ಸಮೇತ ಸಾರ್ವಜನಿಕರ ಜೊತೆಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
0 Comments