ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನಲ್ಲಿ "ಹಿಂದೂ ಏಕತಾ ಶೋಭಯಾತ್ರೆಯು 'ನಡೆಯಿತು.
ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ನಿಮಿತ್ತ ಮೇ 27 ರಂದು ಸಾಯಂಕಾಲ 4.00 ಗಂಟೆಗೆ ಮಂಗಳೂರಿನ ಪಿ. ವಿ. ಎಸ್.ಸರ್ಕಲ್ ನಲ್ಲಿ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯು ಲಾಲ್ ಬಾಗ್ ನ ವರೆಗೆ ಸಾಗಿ, ಸಮಾರೋಪ ಕಾರ್ಯಕ್ರಮದೊಂದಿಗೆ ಸಂಪನ್ನ ಗೊಂಡಿತು.
ಈ ಸಮಾರೂಪ ಸಭೆಯಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಸೌ. ಲಕ್ಷ್ಮಿ ಪೈ ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಮನ್ವ ನಾಯಕರಾದ ಶ್ರೀ ಗುರುಪ್ರಸಾದ್ ಗೌಡ ಹಾಗೂ ಉದಯ್ ಕುಮಾರ್ ಬಿ ಕೆ. ವಕೀಲರು ಬೆಳ್ತಂಗಡಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು, ಭಜನಾ ಮಂಡಳಿಯವರು ಕುಣಿತ ಭಜನೆಯದೊಂದಿಗೆ, ಚಂಡೆ, ವಾದ್ಯ ಬಳಗದವರು ಉಪಸ್ಥಿತರಿದ್ದು ಮೆರುಗು ನೀಡಿದರು.ಈ ಮೆರವಣಿಗೆಯಲ್ಲಿ ವಿಶೇಷವಾಗಿ ರಣರಾಗಿಣೆ ಶಾಖೆಯ ಯುವತಿಯರು, ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ಬಾಲ ಗಂಗಾಧರ ತಿಲಕ್ ಮುಂತಾದ ವೇಷದಲ್ಲಿ ಮಿಂಚಿದರು.ಶೋಭಯಾತ್ರೆಯ ಉದ್ದಕ್ಕೂ ಸಂಸ್ಥೆಯ ಸಾಧಕರು ಧರ್ಮಜಾಗೃತಿ, ಹಿಂದೂ ಏಕತೆ , ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸಂಘಟನೆಗಳು, ಮಹಿಳಾ ಮಂಡಳಿಗಳು, ಇತರ ಮಹಿಳಾ ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು.
0 Comments