ಉಡುಪಿಯಲ್ಲಿ ನಡೆದ "ಹಿಂದೂ ಏಕತಾ ಮೆರವಣಿಗೆ"ಯ ಸಮಾರೋಪ ಸಮಾರಂಭ

ಜಾಹೀರಾತು/Advertisment
ಜಾಹೀರಾತು/Advertisment


*ಸನಾತನ ಸಂಸ್ಥೆಯ ಸಂಸ್ಥಾಪಕರಾದ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಉಡುಪಿಯಲ್ಲಿ ನಡೆದ "ಹಿಂದೂ ಏಕತಾ ಮೆರವಣಿಗೆ"ಯ ಸಮಾರೋಪ ಸಮಾರಂಭ*



*ಉಡುಪಿ* : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ನಿಮಿತ್ತ ಉಡುಪಿಯಲ್ಲಿ "ಹಿಂದೂ ಏಕತಾ ಮೆರವಣಿಗೆ"ಯು ಉಡುಪಿಯಲ್ಲಿ ಸಂಪನ್ನಗೊಂಡಿತು. ನೂರಾರು ಧರ್ಮಪ್ರೇಮಿಗಳು  ಭಾಗವಹಿಸಿದ್ದ  ಶೋಭಾಯಾತ್ರೆಯ ಬಳಿಕ ಸಮಾರೋಪ ಸಭಾ ಕಾರ್ಯಕ್ರವು ನಡೆಯಿತು.


ಸಭೆಯಲ್ಲಿ ಮುಖ್ಯ ವಕ್ತಾರರಾಗಿ ವಿಶ್ವ ಹಿಂದೂ ಪರಿಷತ್ ಕೊಡಿಯಾಲ್ ಬೈಲ್ ಘಟಕದ ಅಧ್ಯಕ್ಷರು ಹಾಗೂ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಶ್ರೀ ಮಧುಸೂದನ ಅಯ್ಯರ್ ಅವರು ಮಾತನಾಡಿ, ಬ್ರಿಟೀಷರ ಕಾಲದಿಂದಲೇ ನಮ್ಮ ಪಠ್ಯ ಪುಸ್ತಕಗಳ ವಿರೂಪೀಕರಣದಿಂದ ನಮ್ಮ ಧರ್ಮವನ್ನೇ ನಾವು ಮರೆಯುವ ಪರಿಸ್ಥಿತಿ ಬಂತು. ಬೇರೆ ಬೇರೆ ಜಾತಿ ಹಾಗೂ ಸಿದ್ಧಾಂತಗಳು ನಮ್ಮಲ್ಲಿ ಇದ್ದರೂ, ನಮ್ಮ ಹಿಂದೂ ಧರ್ಮದ ವಿಚಾರಗಳು ನಮ್ಮನ್ನು ಒಂದಾಗಿ ಜೋಡಿಸುತ್ತದೆ. ನಾವು ಹಿಂದೂಗಳು ಸಂಘಟಿತರಾಗಿದ್ದರೆ ಸನಾತನ ಸಂಸ್ಥೆಯ ದ್ಯೇಯವಾದ ಹಿಂದೂ ರಾಷ್ಟ್ರ ಸ್ಥಾಪನೆಯ ದಿನಗಳು ದೂರವಿಲ್ಲ ಎಂದರು.


ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು  ಮಾತನಾಡುತ್ತಾ ಪರಾತ್ಪರ ಗುರುಗಳ ದೃಷ್ಟಾರತನದ ಬಗ್ಗೆ ಹೇಳಿದರು. ಪ್ರತೀ ಒಬ್ಬ ಹಿಂದೂಗಳು ಧರ್ಮಾಚರಣೆ ಮತ್ತು ಅಧ್ಯಾತ್ಮಿಕ ಸಾಧನೆಯನ್ನು ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಅರ್ಹರಾಗಬೇಕು ಎಂದರು. ಹಾಗೂ, ಸಾಧನೆಯ ಮಹತ್ವದ ಬಗ್ಗೆ  ಹೇಳಿ, ಹಿಂದೂರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಮಾಡಿ ಎಂದು ಹೇಳಿದರು.


Post a Comment

0 Comments