ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ ವಿ. ಬಂಗೇರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಯಶೋಧರ್ ವಿ. ಬಂಗೇರ 




ಮೂಡಬಿದಿರೆ :  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಮೂಡುಬಿದಿರೆ ಇದರ ನೂತನ ಅಧ್ಯಕ್ಷರಾಗಿ ವಿಜಯವಾಣಿ ಪ್ರತಿನಿಧಿ ಯಶೋಧರ ವಿ. ಬಂಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಶನಿವಾರ ಪ್ರೆಸ್  ಕ್ಲಬ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪ್ರತಿನಿಧಿ ಬೆಳುವಾಯಿ ಸೀತಾರಾಮ ಆಚಾರ್ಯ, ಕಾರ್ಯದರ್ಶಿಯಾಗಿ ಸಂಯುಕ್ತ ಕರ್ನಾಟಕ ಪ್ರತಿನಿಧಿ ಪ್ರೇಮಶ್ರೀ ಕಲ್ಲಬೆಟ್ಟು , ಸಂಘಟನಾ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ಹರೀಶ್ ಕೆ . ಆದೂರು  

ಕೋಶಾಧಿಕಾರಿಯಾಗಿ ಕನ್ನಡಪ್ರಭ ಪ್ರತಿನಿಧಿ 

ಎಂ. ಗಣೇಶ್ ಕಾಮತ್ ಆಯ್ಕೆಯಾಗಿದ್ದಾರೆ.


ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಬಿ.ಕೆ. ಅಶ್ರಫ್ ವಾಲ್ಪಾಡಿ (ನಮ್ಮಬೆದ್ರ) ನವೀನ್ ಸಾಲ್ಯಾನ್ (ಮಾಧ್ಯಮ ಬಿಂಬ),ಪ್ರಸನ್ನ ಹೆಗ್ಡೆ (ಪ್ರಜಾವಾಣಿ),  ಧನಂಜಯ ಮೂಡುಬಿದಿರೆ ( ಉದಯವಾಣಿ), ವೇಣುಗೋಪಾಲ ( ಜಯಕಿರಣ),ಶರತ್ ದೇವಾಡಿಗ (ಸಂಜೆ ವಾಣಿ)   ಜೇಸನ್ ತಾಕೋಡೆ ( ಟೈಮ್ಸ್ ಅಫ್ ಬೆದ್ರ )


ಪುನೀತ್ (ತುಳುನಾಡು ವಾರಪತ್ರಿಕೆ ) ಆಯ್ಕೆಯಾಗಿದ್ದಾರೆ 


ನಿರ್ಗಮನ ಅಧ್ಯಕ್ಷ ವೇಣುಗೋಪಾಲ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಗಮನ ಕಾರ್ಯದರ್ಶಿ ಶರತ್ ದೇವಾಡಿಗ ವರದಿ ವಾಚಿಸಿದರು.

ಲೆಕ್ಕಪತ್ರ ಮಂಡನೆ ಸಹಿತ ಇತರೆ ವಿಚಾರ ವಿಷಯಗಳ ಚರ್ಚೆ ನಡೆಯಿತು.

Post a Comment

0 Comments